ADVERTISEMENT

ಬೆಲೆ ನಿಯಂತ್ರಣ: ಗೋಧಿ ದಾಸ್ತಾನು ನಮೂದು ಕಡ್ಡಾಯ

ಪಿಟಿಐ
Published 26 ಮಾರ್ಚ್ 2025, 13:52 IST
Last Updated 26 ಮಾರ್ಚ್ 2025, 13:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ, ಪ್ರತಿ ವಾರವೂ ಗೋಧಿ ದಾಸ್ತಾನು ಮಿತಿ ನಮೂದಿಸುವುದನ್ನು ಏಪ್ರಿಲ್‌ 1ರಿಂದ ಕಡ್ಡಾಯಗೊಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ ವರ್ತಕರು, ಸಗಟುದಾರರು, ಚಿಲ್ಲರೆ ಮಾರಾಟಗಾರರು ಮತ್ತು ಸಂಸ್ಕರಣೆಗಾರರು ಸರ್ಕಾರದ ಆನ್‌ಲೈನ್‌ ಪೋರ್ಟಲ್‌ನಲ್ಲಿ ಪ್ರತಿ ಶುಕ್ರವಾರ ತಮ್ಮಲ್ಲಿರುವ ದಾಸ್ತಾನಿನ ಬಗ್ಗೆ ಕಡ್ಡಾಯವಾಗಿ ನಮೂದಿಸಬೇಕಿದೆ ಎಂದು ಸರ್ಕಾರ ತಿಳಿಸಿದೆ.

ದೇಶದಲ್ಲಿ ಗೋಧಿ ದಾಸ್ತಾನು ಮತ್ತು ಬೆಲೆ ನಿಯಂತ್ರಣದ ಮೇಲೆ ಕೇಂದ್ರ ಆಹಾರ ಇಲಾಖೆಯು ನಿಗಾ ಇಟ್ಟಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.