ADVERTISEMENT

ಐ.ಟಿ. ರಿಟರ್ನ್ಸ್‌ ಅವಧಿ ಇನ್ನಷ್ಟು ವಿಸ್ತರಣೆಗೆ ತಜ್ಞರ ಒಲವು

ಪಿಟಿಐ
Published 5 ಜುಲೈ 2020, 14:59 IST
Last Updated 5 ಜುಲೈ 2020, 14:59 IST
ಐ.ಟಿ. ರಿಟರ್ನ್ಸ್‌
ಐ.ಟಿ. ರಿಟರ್ನ್ಸ್‌   

ನವದೆಹಲಿ: ಕೋವಿಡ್‌ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆ (ಐ.ಟಿ. ರಿಟರ್ನ್ಸ್‌) ಅವಧಿಯನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸು ಸಚಿವಾಲಯವು ತೆಗೆದುಕೊಂಡ ಹಲವು ಕ್ರಮಗಳ ಬಗ್ಗೆ ತೆರಿಗೆ ತಜ್ಞರು ಮೆಚ್ಚುಗೆ ಸೂಚಿಸಿದ್ದು, ಪರಿಸ್ಥಿತಿಯು ಸಹಜ ಸ್ಥಿತಿಗೆ ಬರುವವರೆಗೆ ಇನ್ನೂ ಹೆಚ್ಚಿನ ಕ್ರಮಗಳು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2019–20ನೇ ಹಣಕಾಸು ವರ್ಷದ ಐ.ಟಿ ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು ಈಗಾಗಲೇ ಈ ವರ್ಷದ ನವೆಂಬರ್‌ 30ರವರೆಗೆ ವಿಸ್ತರಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.