ADVERTISEMENT

ನ್ಯಾನೊ ಡಿಎಪಿಗೆ ಒಪ್ಪಿಗೆ: ಮಾಂಡವಿಯಾ

ಪಿಟಿಐ
Published 4 ಮಾರ್ಚ್ 2023, 11:34 IST
Last Updated 4 ಮಾರ್ಚ್ 2023, 11:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇಫ್ಕೊ ಸಂಸ್ಥೆಯ ದ್ರವರೂಪದ ನ್ಯಾನೊ ಡಿಎಪಿ ರಸಗೊಬ್ಬರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್‌ಸುಖ್ ಮಾಂಡವಿಯಾ ಶನಿವಾರ ತಿಳಿಸಿದ್ದಾರೆ.

ನ್ಯಾನೊ ಯೂರಿಯಾ ಬಳಿಕ ಇದೀಗ ನ್ಯಾನೊ ಡಿಎಪಿಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮಾಂಡವಿಯಾ ಅವರು ಟ್ವೀಟ್‌ ಮಾಡಿದ್ದಾರೆ. ರಸಗೊಬ್ಬರದಲ್ಲಿ ಸ್ವಾವಲಂಬನೆ ಸಾಧಿಸುವ ಹಾದಿಯಲ್ಲಿ ಮತ್ತೊಂದು ಸಾಧನೆ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಇಫ್ಕೊ ನ್ಯಾನೊ ಡಿಎಪಿಗೆ ಕೃಷಿ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಯು.ಎ. ಅವಸ್ತಿ ಶುಕ್ರವಾರ ಟ್ವೀಟ್ ಮಾಡಿದ್ದರು.

ADVERTISEMENT

ಇಫ್ಕೊ ಶೀಘ್ರದಲ್ಲೇ ನ್ಯಾನೊ ಡಿಎಪಿ ಬಿಡುಗಡೆ ಮಾಡಲಿದ್ದು, 500 ಮಿಲಿ ಲೀಟರ್‌ ಬಾಟಲಿಯ ಬೆಲೆ ₹600 ಇರಲಿದೆ ಎಂದು ಅವರು ಡಿಸೆಂಬರ್‌ನಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.