
ಪಿಟಿಐ
ನವದೆಹಲಿ: 5 ಲಕ್ಷ ಟನ್‌ನಷ್ಟು ಗೋಧಿ ಹಿಟ್ಟು ಮತ್ತು ಸಂಬಂಧಿತ ಉತ್ಪನ್ನಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
2022ರಲ್ಲಿ ಕೇಂದ್ರ ಸರ್ಕಾರವು ಗೋಧಿ ರಫ್ತನ್ನು ನಿರ್ಬಂಧಿಸಿತ್ತು. ಇದೀಗ ರಫ್ತು ಮೇಲಿನ ನಿರ್ಬಂಧಗಳನ್ನು ಭಾಗಶಃ ತೆಗೆದಿದೆ.
‘ಗೋಧಿ ಹಿಟ್ಟು ಮತ್ತು ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ ಮುಂದುವರಿಯುತ್ತದೆ. ಆದರೆ, ಈಗ 5 ಲಕ್ಷ ಟನ್‌ವರೆಗೆ ಗೋಧಿ ಹಿಟ್ಟು ಮತ್ತು ಸಂಬಂಧಿತ ಉತ್ಪನ್ನಗಳ ರಫ್ತಿಗೆ ಅನುಮತಿ ನೀಡಲಾಗಿದೆ’ ಎಂದು ವಿದೇಶ ವ್ಯಾಪಾರಗಳ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಜನವರಿ 16ರ ಅಧಿಸೂಚನೆಯಲ್ಲಿ ತಿಳಿಸಿದೆ.
ಈ ಉತ್ಪನ್ನಗಳನ್ನು ರಫ್ತು ಮಾಡುವ ರಫ್ತುದಾರರು ಡಿಜಿಎಫ್‌ಟಿನಿಂದ ಅನುಮತಿ ಪಡೆಯಬೇಕಿರುತ್ತದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.