ADVERTISEMENT

2023ರಿಂದ ವಾಹನಗಳಿಗೆ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆ ಕಡ್ಡಾಯ?

ಪಿಟಿಐ
Published 4 ಫೆಬ್ರುವರಿ 2022, 17:06 IST
Last Updated 4 ಫೆಬ್ರುವರಿ 2022, 17:06 IST

ನವದೆಹಲಿ (ಪಿಟಿಐ): ಮುಂದಿನ ವರ್ಷದ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ಸ್ವಯಂಚಾಲಿತ ಫಿಟ್ನೆಸ್ ಕೇಂದ್ರಗಳ ಮೂಲಕ ಮಾಡಿಸುವುದನ್ನು ಹಂತ ಹಂತವಾಗಿ ಕಡ್ಡಾಯಗೊಳಿಸುವ ಆಲೋಚನೆಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಸ್ವಯಂಚಾಲಿತ ಫಿಟ್ನೆಸ್ ಕೇಂದ್ರಗಳ ಮೂಲಕ ಪರೀಕ್ಷೆಯನ್ನು ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸಾರ್ವಜನಿಕರು ಅಭಿಪ್ರಾಯ ತಿಳಿಸಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರವು ಶುಕ್ರವಾರ ಹೇಳಿದೆ.

ಕರಡು ಅಧಿಸೂಚನೆಯ ಪ್ರಕಾರ, ಸರಕು ಸಾಗಣೆಗೆ ಬಳಸುವ ಭಾರಿ ವಾಹನಗಳಿಗೆ ಹಾಗೂ ಪ್ರಯಾಣಿಕರ ಬಳಕೆಯ ಭಾರಿ ವಾಹನಗಳಿಗೆ ಸ್ವಯಂಚಾಲಿತ ಫಿಟ್ನೆಸ್ ಕೇಂದ್ರಗಳ ಮೂಲಕ ಪರೀಕ್ಷೆಯು 2023ರ ಏಪ್ರಿಲ್‌ 1ರಿಂದ ಕಡ್ಡಾಯವಾಗಲಿದೆ.

ADVERTISEMENT

ಮಧ್ಯಮ ಪ್ರಮಾಣದ ಸರಕು ಸಾಗಣೆ ವಾಹನಗಳಿಗೆ ಹಾಗೂ ಮಧ್ಯಮ ಪ್ರಮಾಣದ ಪ್ರಯಾಣಿಕ ವಾಹನಗಳಿಗೆ ಮತ್ತು ಸರಕು ಸಾಗಣೆಯ ಲಘು ವಾಹನಗಳಿಗೆ ಇದು 2024ರ ಜೂನ್ 1ರಿಂದ ಅನ್ವಯವಾಗಲಿದೆ.

ವಾಣಿಜ್ಯ ಹಾಗೂ ವೈಯಕ್ತಿಕ ಬಳಕೆಯ ವಾಹನಗಳು ಸ್ವಯಂಚಾಲಿತ ಫಿಟ್ನೆಸ್ ಕೇಂದ್ರಗಳಿಂದ ಫಿಟ್ನೆಸ್ ಪ್ರಮಾಣಪತ್ರ ಪಡೆಯುವುದನ್ನು ಮುಂದಿನ ದಿನಗಳಲ್ಲಿ ಕಡ್ಡಾಯಗೊಳಿಸಲಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕಾರ್ಯದರ್ಶಿ ಗಿರಿಧರ ಅರಮನೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.