ADVERTISEMENT

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ₹ 670 ಕೋಟಿ ನೀಡಿದ ಕೇಂದ್ರ

ಪಿಟಿಐ
Published 2 ನವೆಂಬರ್ 2020, 3:08 IST
Last Updated 2 ನವೆಂಬರ್ 2020, 3:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಬಂಡವಾಳ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅವುಗಳಿಗೆ ₹ 670 ಕೋಟಿ ನೀಡಿದೆ.

ಕೃಷಿ ವಲಯಕ್ಕೆ ಸಾಲ ನೀಡುವಲ್ಲಿ ಇವುಗಳ ಮಹತ್ವವನ್ನು ಪರಿಗಣಿಸಿ ನೆರವು ನೀಡಿದೆ. ಈ ನೆರವು, ಬ್ಯಾಂಕ್‌ಗಳ 2021ರ ಮಾರ್ಚ್‌ 31ರವರೆಗಿನ ಬಂಡವಾಳ ಅಗತ್ಯವನ್ನು ಪೂರೈಸಲಿದೆ.

43 ಬ್ಯಾಂಕ್‌ಗಳಲ್ಲಿ, ಮೂರನೇ ಒಂದು ಭಾಗದಷ್ಟು ಬ್ಯಾಂಕ್‌ಗಳು ನಷ್ಟದಲ್ಲಿವೆ. ಶಾಸನಬದ್ಧ ಬಂಡವಾಳ ಪ್ರಮಾಣ ಶೇ 9ರಷ್ಟನ್ನು ಹೊಂದಲು ಅವುಗಳಿಗೆ ಬಂಡವಾಳದ ನೆರವು ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬಂಡವಾಳ ನೆರವು ನೀಡುವ ಸದ್ಯದ ಯೋಜನೆಯಲ್ಲಿ, ಕೇಂದ್ರ ಸರ್ಕಾರ, ಸಂಬಂಧಪಟ್ಟ ರಾಜ್ಯಗಳು ಹಾಗೂ ಪ್ರಾಯೋಜಕ ಬ್ಯಾಂಕ್‌ಗಳು 50:15:35 ಅನುಪಾತದಲ್ಲಿ ಹಣ ಒದಗಿಸಲಿವೆ.

2019–20ನೇ ಹಣಕಾಸು ವರ್ಷದಲ್ಲಿ ಈ ಬ್ಯಾಂಕ್‌ಗಳ ಒಟ್ಟಾರೆ ನಿವ್ವಳ ನಷ್ಟ ₹ 2,206 ಕೋಟಿ ಆಗಿದೆ. 2018–19ನೇ ಹಣಕಾಸು ವರ್ಷದಲ್ಲಿ ನಿವ್ವಳ ನಷ್ಟ ₹ 652 ಕೋಟಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.