ADVERTISEMENT

ರಸ್ತೆ ನಿರ್ಮಾಣಕ್ಕೆ ಬಂಡವಾಳ ಸಂಗ್ರಹಿಸಲಿರುವ ಕೇಂದ್ರ

ಪಿಟಿಐ
Published 23 ಆಗಸ್ಟ್ 2022, 16:09 IST
Last Updated 23 ಆಗಸ್ಟ್ 2022, 16:09 IST

ನವದೆಹಲಿ (ಪಿಟಿಐ): ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ನಾಲ್ಕು ಯೋಜನೆಗಳಿಗೆ ಹಣ ಸಂಗ್ರಹಿಸಲು ಕೇಂದ್ರ ಸರ್ಕಾರವು ಮುಂದಿನ ತಿಂಗಳು ಬಂಡವಾಳ ಮಾರುಕಟ್ಟೆಯ ಮೊರೆ ಹೋಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಮೂಲಸೌಕರ್ಯ ಹೂಡಿಕೆ ಟ್ರಸ್ಟ್ಸ್‌ ಮೂಲಕ ಹಣ ಸಂಗ್ರಹ ಮಾಡಲಾಗುತ್ತದೆ. ಸಣ್ಣ ಹೂಡಿಕೆದಾರರು ಗರಿಷ್ಠ ₹ 10 ಲಕ್ಷದವರೆಗೆ ಹೂಡಿಕೆ ಮಾಡಬಹುದು ಎಂದು ಗಡ್ಕರಿ ಹೇಳಿದ್ದಾರೆ.

‘ಹೂಡಿಕೆ ಮಾಡಿದವರಿಗೆ ಶೇಕಡ 7ರಿಂದ ಶೇ 8ರಷ್ಟು ಲಾಭ ಖಂಡಿತವಾಗಿಯೂ ಸಿಗುತ್ತದೆ’ ಎಂದು ಅವರು ಫಿಕ್ಕಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ADVERTISEMENT

ಮ್ಯೂಚುವಲ್‌ ಫಂಡ್‌ಗಳು ಹೂಡಿಕೆದಾರರಿಂದ ಹಣ ಸಂಗ್ರಹಿಸಿ ವಿವಿಧೆಡೆ ಹೂಡಿಕೆ ಮಾಡುವ ರೀತಿಯಲ್ಲಿಯೇ ಮೂಲಸೌಕರ್ಯ ಹೂಡಿಕೆ ಟ್ರಸ್ಟ್ಸ್‌ ಕೂಡ ಹೂಡಿಕೆದಾರರಿಂದ ಬಂಡವಾಳ ಸಂಗ್ರಹ ಮಾಡುತ್ತದೆ. ಅದನ್ನು ಮುಂದೆ ಲಾಭ ಸಿಗಬಹುದಾದ ಕಡೆಗಳಲ್ಲಿ ತೊಡಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.