ADVERTISEMENT

ತ್ವರಿತವಾಗಿ ‘ಕಂಪನಿಗಳ ತಯಾರಿಕಾ ಘಟಕ ಸ್ಥಾಪನೆ ಕೇಂದ್ರದ ಇಚ್ಛೆ: ತರುಣ್‌ ಬಜಾಜ್

ಪಿಟಿಐ
Published 4 ಫೆಬ್ರುವರಿ 2022, 15:26 IST
Last Updated 4 ಫೆಬ್ರುವರಿ 2022, 15:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಹೊಸ ಹೊಸ ಕಂಪನಿಗಳು ಭಾರತದಲ್ಲಿಯೇ ತಮ್ಮ ತಯಾರಿಕಾ ಘಟಕಗಳನ್ನು ತ್ವರಿತವಾಗಿ ಸ್ಥಾಪಿಸಬೇಕು ಎಂದು ಸರ್ಕಾರ ಬಯಸುತ್ತದೆ. ಆ ಕಾರಣಕ್ಕಾಗಿಯೇ ಶೇಕಡ 15ರಷ್ಟು ರಿಯಾಯಿತಿಯ ಕಾರ್ಪೊರೇಟ್‌ ತೆರಿಗೆ ದರವನ್ನು 2024ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ ಎಂದು ರೆವಿನ್ಯು ಕಾರ್ಯದರ್ಶಿ ತರುಣ್‌ ಬಜಾಜ್ ಹೇಳಿದ್ದಾರೆ.

2022–23ನೇ ಸಾಲಿನ ಬಜೆಟ್‌ನಲ್ಲಿ ಹೊಸ ತಯಾರಿಕಾ ಘಟಕಗಳಿಗೆ ಶೇ 15ರ ರಿಯಾಯಿತಿ ದರದ ಕಾರ್ಪೊರೇಟ್‌ ತೆರಿಗೆಯನ್ನು ಒಂದು ವರ್ಷದವರೆಗೆ ವಿಸ್ತರಿಸುವ ಪ್ರಸ್ತಾವ ಮಾಡಲಾಗಿದೆ.

2019ರಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್ ತೆರಿಗೆ ದರವನ್ನು ಕಡಿಮೆ ಮಾಡುವಾಗ, 2019ರಅಕ್ಟೋಬರ್ 1ರಂದು ಅಥವಾ ನಂತರ ಯಾವುದೇ ಹೊಸ ದೇಶಿ ಕಂಪನಿಯು ತಯಾರಿಕಾ ಘಟಕ ಸ್ಥಾಪನೆಗೆ ಹೊಸ ಹೂಡಿಕೆ ಮಾಡುವಲ್ಲಿ, ಶೇ 15ರ ದರದಲ್ಲಿ ತೆರಿಗೆಯನ್ನು ಪಾವತಿಸುವ ಆಯ್ಕೆಯನ್ನು ಹೊಂದಿರುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ, 2023ರ ಮಾರ್ಚ್‌ 31ರಂದು ಅಥವಾ ಅದಕ್ಕೂ ಮೊದಲು ತಯಾರಿಕೆ ಆರಂಭಿಸಬೇಕು ಎಂದು ತಿಳಿಸಿತ್ತು. ಈ ಬಾರಿಯ ಬಜೆಟ್‌ನಲ್ಲಿ ಅವಧಿಯನ್ನು 2024ರ ಮಾರ್ಚ್‌ವರೆಗೂ ವಿಸ್ತರಿಸಲಾಗಿದೆ.

ADVERTISEMENT

ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹವು ಹೆಚ್ಚಾಗುತ್ತಿದೆ. ಕಾರ್ಪೊರೇಟ್‌ ವಲಯವು ಉತ್ತಮ ಸ್ಥಿತಿಯಲ್ಲಿದೆ ಎನ್ನುವುದು ಇದರ ಅರ್ಥ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಗೆ ಹೋಲಿಸಿದರೆ ತೆರಿಗೆ ಆದಾಯದ ಅನುಪಾತವು ಇದುವರೆಗಿನ ಗರಿಷ್ಠ ಆಗಲಿದೆ ಎಂದು ಅಸೋಚಾಂ ಕಾರ್ಯಕ್ರಮದಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.