ADVERTISEMENT

ಜಿಎಸ್‌ಟಿ ಅಡಿ ಕ್ರಿಪ್ಟೊ ವರ್ಗೀಕರಣ

ಪಿಟಿಐ
Published 20 ಮಾರ್ಚ್ 2022, 14:10 IST
Last Updated 20 ಮಾರ್ಚ್ 2022, 14:10 IST

ನವದೆಹಲಿ: ಕ್ರಿ‍ಪ್ಟೊ ಕರೆನ್ಸಿಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸೇವೆಗಳು ಅಥವಾ ಉತ್ಪನ್ನ ಎಂದು ವರ್ಗೀಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಕ್ರಿಪ್ಟೊ ಕರೆನ್ಸಿ ವಹಿವಾಟಿನ ಅಷ್ಟೂ ಮೊತ್ತದ ಮೇಲೆ ತೆರಿಗೆ ವಿಧಿಸಬಹುದು ಎಂಬ ಆಲೋಚನೆ ಸರ್ಕಾರಕ್ಕಿದೆ.

ಈಗಿನ ನಿಯಮಗಳ ಅನ್ವಯ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರಗಳು ನೀಡುವ ಸೇವೆಗಳಿಗೆ ಶೇ 18ರಷ್ಟು ಜಿಎಸ್‌ಟಿ ಅನ್ವಯವಾಗುತ್ತದೆ. ಕ್ರಿಪ್ಟೊ ಕರೆನ್ಸಿಗಳ ಸ್ವರೂಪವು ಶೇ 28ರಷ್ಟು ತೆರಿಗೆ ಅನ್ವಯವಾಗುವ ಲಾಟರಿ, ಕ್ಯಾಸಿನೊ, ಬೆಟ್ಟಿಂಗ್, ಜೂಜು, ಕುದುರೆ ರೇಸ್‌ನಂತೆಯೇ ಇವೆ ಎಂದು ಜಿಎಸ್‌ಟಿ ಅಧಿಕಾರಿಗಳು ಹೇಳಿದ್ದಾರೆ.

ಕ್ರಿಪ್ಟೊ ಕರೆನ್ಸಿಗಳ ವರ್ಗೀಕರಣದ ಬಗ್ಗೆ ಸ್ಪಷ್ಟತೆ ಸಿಕ್ಕ ನಂತರದಲ್ಲಿ ತೆರಿಗೆ ಪ್ರಮಾಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.