ADVERTISEMENT

ನೇರ ತೆರಿಗೆ ಸಂಗ್ರಹ ಇಳಿಕೆ

ಕಾರ್ಪೊರೇಟ್‌, ವೈಯಕ್ತಿಕ ಆದಾಯ ತೆರಿಗೆ ಕೊರತೆ ಪರಿಣಾಮ

ಪಿಟಿಐ
Published 7 ಜೂನ್ 2020, 19:30 IST
Last Updated 7 ಜೂನ್ 2020, 19:30 IST
tax
tax   
""

ನವದೆಹಲಿ: 2019–20ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆಯಸರಾಸರಿ ಸಂಗ್ರಹವು ಶೇ 4.92ರಷ್ಟು ಇಳಿಕೆಯಾಗಿದ್ದು, ₹ 12.33 ಲಕ್ಷ ಕೋಟಿಗಳಷ್ಟಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಕಾರ್ಪೊರೇಟ್‌ ತೆರಿಗೆ ಸಂಗ್ರಹದಲ್ಲಿನ ಇಳಿಕೆ, ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮತ್ತು ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳ ಮಾಡಿರುವುದರಿಂದ ನೇರ ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗಿದೆ.

ಕಾರ್ಪೊರೇಟ್‌ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆ ವರಮಾನ ಕೊರತೆ ಬೀಳದೇ ಇದ್ದರೆ ತೆರಿಗೆ ಸಂಗ್ರಹ ಶೇ 8ರಷ್ಟು ವೃದ್ಧಿಯಾಗಿ ₹ 14.01 ಲಕ್ಷ ಕೋಟಿಗಳಿಗೆ ಏರಿಕೆಯಾಗುತ್ತಿತ್ತು.

ADVERTISEMENT

ನಿವ್ವಳ ತೆರಿಗೆ ಸಂಗ್ರಹವು 2018–19ನೇ ಹಣಕಾಸು ವರ್ಷಕ್ಕಿಂತಲೂ ಕಡಿಮೆ ಇದೆ.

ಆದರೆ, ಇದು ನಿರೀಕ್ಷಿತವೇ ಆಗಿದೆ. ಏಕೆಂದರೆ ತೆರಿಗೆ ವ್ಯವಸ್ಥೆಯಲ್ಲಿನ ಐತಿಹಾಸಿಕ ಬದಲಾವಣೆ ಹಾಗೂ ಗರಿಷ್ಠ ಮರುಪಾವತಿ ನೀಡಿದ್ದರಿಂದ ನೇರ ತೆರಿಗೆ ಸಂಗ್ರಹ ಕಡಿಮೆಯಾಗುವ ಸೂಚನೆ ಇತ್ತು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ.

ತೆರಿಗೆ ಮರುಪಾವತಿ: 2019–20ನೇ ಹಣಕಾಸು ವರ್ಷಕ್ಕೆ ₹ 1.84 ಲಕ್ಷ ಕೋಟಿ ತೆರಿಗೆ ಮರುಪಾವತಿ ಮಾಡಲಾಗಿದೆ. 2018–19ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 14ರಷ್ಟು ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.