ADVERTISEMENT

ಈ ವರ್ಷ ನೇರ ತೆರಿಗೆ ಸಂಗ್ರಹ ಶೇ 23.8ರಷ್ಟು ಹೆಚ್ಚಳ

ಪಿಟಿಐ
Published 9 ಅಕ್ಟೋಬರ್ 2022, 12:41 IST
Last Updated 9 ಅಕ್ಟೋಬರ್ 2022, 12:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ನೇರ ತೆರಿಗೆಯ ಸರಾಸರಿ ಸಂಗ್ರಹವು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ ಅಕ್ಟೋಬರ್‌ 8ರವರೆಗೆ ಶೇಕಡ 23.8ರಷ್ಟು ಹೆಚ್ಚಾಗಿದ್ದು, ₹ 8.98 ಲಕ್ಷ ಕೋಟಿಗೆ ತಲುಪಿದೆ ಎಂದು ತೆರಿಗೆ ಇಲಾಖೆ ತಿಳಿಸಿದೆ.

ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್‌ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗಿರುವುದೇ ಇದಕ್ಕೆ ಕಾರಣ ಎಂದು ಅದು ಹೇಳಿದೆ. ಮರುಪಾವತಿ ಬಳಿಕ ನಿವ್ವಳ ತೆರಿಗೆ ಸಂಗ್ರಹವು ₹ 7.45 ಲಕ್ಷ ಕೋಟಿಗೆ ತಲುಪಿದೆ. ಇದು ಬಜೆಟ್‌ ಅಂದಾಜಿಗಿಂತ ಶೇ 52.46ರಷ್ಟು ಹೆಚ್ಚು ಎಂದು ಮಾಹಿತಿ ನೀಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಮೂಲಕ ₹ 14.20 ಲಕ್ಷ ಕೋಟಿ ವರಮಾನ ಸಂಗ್ರಹ ಆಗುವ ಅಂದಾಜನ್ನು ಸರ್ಕಾರ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.