
ಪ್ರಜಾವಾಣಿ ವಾರ್ತೆಬೆಂಗಳೂರು: ಚಿನ್ನಾಭರಣ ಮಾರಾಟ ಕಂಪನಿ ಜಿಆರ್‌ಟಿ ಜುವೆಲರ್ಸ್, ಆಷಾಢ ಮಾಸದಲ್ಲಿ ತನ್ನಲ್ಲಿ ಚಿನ್ನ, ಆಭರಣ ಖರೀದಿಸುವವರಿಗಾಗಿ ‘ಆಷಾಢ ಆಶ್ಚರ್ಯ’ ಕೊಡುಗೆ ಆರಂಭಿಸಿದೆ. ಇದರ ಅಡಿಯಲ್ಲಿ ಪ್ರತಿ ಖರೀದಿಗೂ ಒಂದು ಉಡುಗೊರೆ ಇರುತ್ತದೆ ಎಂದು ಕಂಪನಿ ಹೇಳಿದೆ.
ಖರೀದಿಸಿದ ಚಿನ್ನ, ಆಭರಣಗಳ ಮೌಲ್ಯ ಹೆಚ್ಚಿದ್ದರೆ ಉಡುಗೊರೆಯೂ ದೊಡ್ಡದಿರುತ್ತದೆ. ಬ್ಯಾಂಕಿಂಗ್ ಪಾಲುದಾರರ ಮೂಲಕ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಯುಪಿಐ ಬಳಸಿ ಹಣ ಪಾವತಿ ಮಾಡುವವರಿಗೆ ಆಶ್ಚರ್ಯಕರ ಉಡುಗೊರೆಗಳು ಇರಲಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಈ ಕೊಡುಗೆಗಳು ಆನ್‌ಲೈನ್ ಹಾಗೂ ಆಫ್‌ಲೈನ್ ಖರೀದಿಗಳಿಗೆ ಅನ್ವಯವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.