ಬೆಂಗಳೂರು: ಜಿಆರ್‌ಟಿ ಜ್ಯುವೆಲರ್ಸ್, ತಮಿಳುನಾಡು ಕಿಡ್ನಿ ಸಂಶೋಧನಾ ಪ್ರತಿಷ್ಠಾನಕ್ಕೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ₹1 ಕೋಟಿ ನೀಡಿದೆ.
ಈ ದೇಣಿಗೆಯಿಂದ ಉಚಿತ ಅಥವಾ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯ ದೊರೆಯಲಿದೆ ಎಂದು ಜಿಆರ್‌ಟಿ ಜ್ಯುವೆಲರ್ಸ್ ತಿಳಿಸಿದೆ.
‘ನಮಗೆ, ವ್ಯವಹಾರ ಮತ್ತು ಸಮುದಾಯ ಎರಡು ಕಣ್ಣುಗಳಿದ್ದಂತೆ. ಸಮಾಜಕ್ಕೆ ಹಿಂತಿರುಗಿಸುವುದು ದಾನದ ಕಾರ್ಯವಲ್ಲ, ಬದಲಾಗಿ ನಾವು ಕೃತಜ್ಞತೆಯಿಂದ ನಿರ್ವಹಿಸುವ ಜವಾಬ್ದಾರಿಯಾಗಿದೆ’ ಎಂದು ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್.ರಾಧಾಕೃಷ್ಣನ್ ಹೇಳಿದ್ದಾರೆ.
ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಆನಂದ್ ಅನಂತಪದ್ಮನಾಭನ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.