ADVERTISEMENT

ಯಲಹಂಕದಲ್ಲಿ ಜಿಆರ್‌ಟಿ ಬೃಹತ್ ಮಳಿಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 15:53 IST
Last Updated 10 ಮಾರ್ಚ್ 2023, 15:53 IST

ಬೆಂಗಳೂರು: ಜಿಆರ್‌ಟಿ ಜುವೆಲರ್ಸ್‌ ಕಂಪನಿಯು ನಗರದ ಯಲಹಂಕದಲ್ಲಿ ಶುಕ್ರವಾರ ಹೊಸ ಮಳಿಗೆ ಉದ್ಘಾಟಿಸಿದೆ. ಸಾಂಪ್ರದಾಯಿಕ ವಿನ್ಯಾಸದ ಆಭರಣಗಳು ಮತ್ತು ಆಧುನಿಕ ವಿನ್ಯಾಸದ ಆಭರಣಗಳು ಇಲ್ಲಿ ಲಭ್ಯವಿರಲಿವೆ ಎಂದು ಕಂಪನಿ ತಿಳಿಸಿದೆ.

ಹೊಸ ಮಳಿಗೆ ಉದ್ಘಾಟನೆಯ ಭಾಗವಾಗಿ, ಚಿನ್ನದ ಆಭರಣಗಳಿಗೆ ಪ್ರತಿ ಗ್ರಾಂಗೆ ₹ 50 ರಿಯಾಯಿತಿ, ಹಳೆಯ ಚಿನ್ನದ ವಿನಿಮಯಕ್ಕೆ ಪ್ರತಿ ಗ್ರಾಂಗೆ ₹ 50 ಹೆಚ್ಚು ಪಾವತಿ, ವಜ್ರ ಹಾಗೂ ಕತ್ತರಿಸದ ವಜ್ರದ ಆಭರಣಗಳ ಮೌಲ್ಯದ ಮೇಲೆ ಶೇ 10ರಷ್ಟು ರಿಯಾಯಿತಿ, ಬೆಳ್ಳಿಯ ವಸ್ತುಗಳ ಮೇಕಿಂಗ್ ವೆಚ್ಚದ ಮೇಲೆ ಶೇ 25ರಷ್ಟು ರಿಯಾಯಿತಿ ಹಾಗೂ ಬೆಳ್ಳಿಯ ಆಭರಣಗಳ ಎಂಆರ್‌ಪಿ ಮೇಲೆ ಶೇ 10ರಷ್ಟು ರಿಯಾಯಿತಿ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಳಿಗೆ ಉದ್ಘಾಟನೆಯ ಭಾಗವಾಗಿ ನೀಡುತ್ತಿರುವ ಕೊಡುಗೆಗಳು ಗ್ರಾಹಕರಿಗೆ ಖುಷಿ ತರಲಿದೆ ಎಂಬ ವಿಶ್ವಾಸವಿದೆ. ಕೊಡುಗೆಗಳು ಈ ಒಂದು ತಿಂಗಳ ಅವಧಿಗೆ ಮುಂದುವರಿಯಲಿವೆ ಎಂದು ಜುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ‘ಆನಂದ್’ ಅನಂತಪದ್ಮನಾಭನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.