ADVERTISEMENT

ಸೇವಾದಾತರಿಗೆ ಏ.30ರವರೆಗೆರಾಜಿ ತೆರಿಗೆ ಆಯ್ಕೆಗೆ ಅವಕಾಶ

ಪಿಟಿಐ
Published 7 ಏಪ್ರಿಲ್ 2019, 20:00 IST
Last Updated 7 ಏಪ್ರಿಲ್ 2019, 20:00 IST
   

ನವದೆಹಲಿ: ವಿವಿಧ ಸೇವೆಗಳನ್ನು ನೀಡುವ, ವಾರ್ಷಿಕ ₹ 50 ಲಕ್ಷದವರೆಗೆ ವಹಿವಾಟು ನಡೆಸುತ್ತಿರುವವರಿಗೆ ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌) ಆಯ್ಕೆ ಮಾಡಿಕೊಳ್ಳಲು ಈ ತಿಂಗಳ 30ರವರೆಗೆ ಅವಕಾಶ ನೀಡಲಾಗಿದೆ.

ಇದನ್ನು ಆಯ್ಕೆ ಮಾಡಿಕೊಳ್ಳುವವರು ‘ಜಿಎಸ್‌ಟಿ ಸಿಎಂಪಿ–02’ ಅರ್ಜಿ ನಮೂನೆ ಸಲ್ಲಿಸಬೇಕು.‌ ಹೊಸದಾಗಿ ಆಯ್ಕೆ ಮಾಡಿಕೊಳ್ಳುವಾಗ ನೋಂದಣಿ ಸಂದರ್ಭದಲ್ಲಿ ‘ಜಿಎಸ್‌ಟಿ ಆರ್‌ಇಜಿ–01’ ಅರ್ಜಿ ನಮೂನೆ ಸಲ್ಲಿಸಬೇಕು.

ಹಣಕಾಸು ವರ್ಷದ ಆರಂಭದಿಂದ ಅಥವಾ ಹೊಸ ನೋಂದಣಿ ಸಂಖ್ಯೆ ಪಡೆದ ದಿನಾಂಕದಿಂದ ಶೇ 6ರ ತೆರಿಗೆ ದರ ಅನ್ವಯಿಸಲಿದೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.