ADVERTISEMENT

ರಿಯಲ್‌ ಎಸ್ಟೇಟ್‌ ತೆರಿಗೆ ಭಾನುವಾರ ನಿರ್ಧಾರ ?

ಮಾರಾಟ ರಿಟರ್ನ್‌ ಸಲ್ಲಿಕೆ ಗಡುವು ವಿಸ್ತರಣೆ

ಪಿಟಿಐ
Published 20 ಫೆಬ್ರುವರಿ 2019, 20:00 IST
Last Updated 20 ಫೆಬ್ರುವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಿಯಲ್‌ ಎಸ್ಟೇಟ್‌ ಮತ್ತು ಲಾಟರಿ ತೆರಿಗೆ ಸಂಬಂಧ ನಿರ್ಧಾರ ಕೈಗೊಳ್ಳುವುದನ್ನು ಜಿಎಸ್‌ಟಿ ಮಂಡಳಿಯು ಭಾನುವಾರಕ್ಕೆ ಮುಂದೂಡಿದೆ.

ಜನವರಿ ತಿಂಗಳ ಮಾರಾಟ ರಿಟರ್ನ್‌ ಸಲ್ಲಿಕೆಯ ಗಡುವನ್ನು ಇದೇ 22ರವರೆಗೆ ವಿಸ್ತರಿಸಲಾಗಿದೆ. ‘ಜಿಎಸ್‌ಟಿಆರ್‌–3ಬಿ’ ಸಲ್ಲಿಕೆಗೆ ಫೆ. 20 (ಬುಧವಾರ) ಕೊನೆಯ ದಿನವಾಗಿತ್ತು.

‘ನಿರ್ಮಾಣ ಹಂತದಲ್ಲಿ ಇರುವ ಗೃಹ ನಿರ್ಮಾಣ ಯೋಜನೆಗಳಿಗೆ ಜಿಎಸ್‌ಟಿ ತಗ್ಗಿಸುವ ಸಂಬಂಧ ಮಂಡಳಿಯು ಇದೇ 24ರಂದು ಸಭೆ ಸೇರಿ ಚರ್ಚಿಸಲಿದೆ. ಬುಧವಾರ ನಡೆದ ಸಭೆಯನ್ನು ಭಾನುವಾರಕ್ಕೆ ಮುಂದೂಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.