ADVERTISEMENT

ಆ. 27ರಂದು ಜಿಎಸ್‌ಟಿ ಸಭೆ?

ಪಿಟಿಐ
Published 19 ಆಗಸ್ಟ್ 2020, 21:51 IST
Last Updated 19 ಆಗಸ್ಟ್ 2020, 21:51 IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಸಭೆಯು ಆಗಸ್ಟ್‌ 27ರಂದು ನಡೆಯುವ ಸಾಧ್ಯತೆ ಇದ್ದು, ರಾಜ್ಯಗಳಿಗೆ ಪರಿಹಾರ ನೀಡುವುದು ಹಾಗೂ ಆದಾಯ ಕೊರತೆಯನ್ನು ತುಂಬಿಕೊಳ್ಳಲು ಮಾರುಕಟ್ಟೆಯಿಂದ ಸಾಲ ಪಡೆಯುವುದರ ಕಾನೂನು ಬಾಧ್ಯತೆಯ ಬಗ್ಗೆ ಅಟಾರ್ನಿ ಜನರಲ್ ನೀಡಿರುವ ಅಭಿಪ್ರಾಯದ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ.

ರಾಜ್ಯಗಳು ಜಿಎಸ್‌ಟಿ ಆದಾಯದಲ್ಲಿ ಎದುರಿಸುವ ಕೊರತೆಯನ್ನು ಕೇಂದ್ರವು ತನ್ನ ಖಜಾನೆಯಿಂದ ಭರ್ತಿ ಮಾಡಿಕೊಡಬೇಕು ಎಂದೇನೂ ಇಲ್ಲ ಎನ್ನುವ ಅಭಿಪ್ರಾಯವನ್ನು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಯದ ಕೊರತೆಯನ್ನು ತುಂಬಿಸಿಕೊಳ್ಳಲು ರಾಜ್ಯಗಳು ಮಾರುಕಟ್ಟೆಯಿಂದ ಹಣ ಸಂಗ್ರಹಿಸಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT