ADVERTISEMENT

ಜಿಎಸ್‌ಟಿ ಜಾರಿ: ನ್ಯಾಯಯುತ ವ್ಯಾಪಾರ ಪ್ರಮಾಣ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 21:59 IST
Last Updated 1 ಜುಲೈ 2021, 21:59 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: ವಿವಿಧ ರಾಜ್ಯಗಳಲ್ಲಿ ಬೇರೆ, ಬೇರೆ ತೆರಿಗೆ ವಿಧಿಸುತ್ತಿದ್ದರಿಂದ ದೇಶದಲ್ಲಿ ನ್ಯಾಯಯುತವಲ್ಲದ ವ್ಯಾಪಾರ ವ್ಯವಸ್ಥೆ ಇತ್ತು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ದೇಶದಲ್ಲಿ ಒಂದೇ ತೆರಿಗೆ ಮಾಡಿದ ನಂತರ ನ್ಯಾಯಯುತ ವ್ಯಾಪಾರದ ‍ಪ್ರಮಾಣ ಹೆಚ್ಚಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ರಾಜ್ಯ ತೆರಿಗೆ ಸಲಹೆ ಗಾರರ ಸಂಘ ಗುರುವಾರ ಜಿಎಸ್‌ಟಿ ಜಾರಿಯ ನಾಲ್ಕನೇ ವರ್ಷದ ದಿನ ಅಂಗವಾಗಿ ಆಯೋಜಿಸಿದ್ದ ವರ್ಚು ವಲ್ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಎಸ್‌ಟಿ ಜಾರಿಯ ನಾಲ್ಕು ವರ್ಷ ಗಳ ಸಾಧನೆ ದೊಡ್ಡದಿದೆ. ಮುಂದಿನ 40 ವರ್ಷಗಳ ಬಗ್ಗೆ ಚಿಂತನೆ ಮಾಡಬೇಕಿದೆ ಎಂದರು.ಪ್ರವಾಸ, ಸಾರಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೆರಿಗೆ ವಿಧಿಸುವ ವಿಷಯದಲ್ಲಿ ಸಣ್ಣ ಪ್ರಮಾಣದ ಗೊಂದಲಗಳಿವೆ. ಅವುಗಳನ್ನು ಬಗೆಹರಿಸಿಕೊಂಡು ಮುಂದೆ ಸಾಗಲಾ ಗುತ್ತಿದೆ.ಹತ್ತು ವರ್ಷಗಳ ಕಾಲ ಚರ್ಚೆ ಮಾಡಿದ ನಂತರ ಜಿಎಸ್‌ಟಿ ಜಾರಿಗೊಳಿಸಲಾಗಿದೆ. ಹಲವಾರು ವೈರುಧ್ಯ ಮತ್ತು ವೈವಿಧ್ಯತೆ ರಾಜ್ಯಗಳನ್ನು ಒಗ್ಗೂಡಿಸಿಕೊಂಡು ಹೋಗುವುದು ಬಹುದೊಡ್ಡ ಕೆಲಸ. ಈ ದೊಡ್ಡ ಕೆಲಸದ ಹಿಂದಿರುವ ಶಕ್ತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಎಂದು ಅವರು ಬಣ್ಣಿಸಿದರು. ಜಿಎಸ್‌ಟಿ ವ್ಯವಸ್ಥೆ ದೇಶದಲ್ಲಿ ಯಶಸ್ವಿಯಾಗಲು ತೆರಿಗೆ ಸಲಹೆಗಾರರ ಕೊಡುಗೆ ಅಪಾರವಾಗಿದೆ. ತೆರಿಗೆ ಸಲಹೆಗಾರರು, ತೆರಿಗೆ ಅಧಿಕಾರಿಗಳು ಜಂಟಿಯಾಗಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.