ADVERTISEMENT

ಜಿಎಸ್‌ಟಿ ವಿವರ: ಗಡುವು ವಿಸ್ತರಣೆ

ಪಿಟಿಐ
Published 30 ಸೆಪ್ಟೆಂಬರ್ 2020, 18:22 IST
Last Updated 30 ಸೆಪ್ಟೆಂಬರ್ 2020, 18:22 IST
   

ನವದೆಹಲಿ: 2018–19ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಜಿಎಸ್‌ಟಿ ವಾರ್ಷಿಕ ವಿವರ ಮತ್ತು ಲೆಕ್ಕಪತ್ರ ವಿವರ ಸಲ್ಲಿಸಲು ಇದ್ದ ಗಡುವನ್ನು ಕೇಂದ್ರ ಸರ್ಕಾರವು ಒಂದು ತಿಂಗಳ ಮಟ್ಟಿಗೆ ಮುಂದೂಡಿದೆ. ಹೊಸ ಗಡುವಿನ ಅನ್ವಯ, ಅಕ್ಟೋಬರ್ 31ರೊಳಗೆ ಈ ವಿವರ ಸಲ್ಲಿಸಬೇಕು.

‘ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ, ಚುನಾವಣಾ ಆಯೋಗದಿಂದ ಅನುಮತಿ ಪಡೆದು ದಿನಾಂಕ ವಿಸ್ತರಣೆ ಮಾಡಲಾಗಿದೆ’ ಎಂದು ಕೇಂದ್ರ ಪರೋಕ್ಷ ತೆರಿಗೆ ಮಂಡಳಿ ಹೇಳಿದೆ. ಈ ಮೊದಲಿನ ಗಡುವಿನ ಪ್ರಕಾರ, ಸೆಪ್ಟೆಂಬರ್ 30ರೊಳಗೆ ಈ ವಿವರಗಳನ್ನು ಸಲ್ಲಿಸಬೇಕಿತ್ತು.

ಮೇ ತಿಂಗಳಲ್ಲಿ ಕೂಡ ಗಡುವು ವಿಸ್ತರಣೆ ಮಾಡಿದ್ದ ಕೇಂದ್ರ ಸರ್ಕಾರವು, ಸೆಪ್ಟೆಂಬರ್‌ ಅಂತ್ಯದವರೆಗೆ ಅವಕಾಶ ಕಲ್ಪಿಸಿತ್ತು. ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಜಿಎಸ್‌ಟಿ ವಾರ್ಷಿಕ ವಿವರ ಸಲ್ಲಿಸಲು ಹೆಣಗಾಟ ನಡೆಸುತ್ತಿರುವ ಉದ್ಯಮಗಳಿಗೆ ಇದರಿಂದ ನೆರವಾಗುತ್ತದೆ ಎಂದು ತೆರಿಗೆ ಸಲಹೆಗಾರ ಅಭೀಷೇಕ್ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.