ಐಪಿಎಲ್ ಲೋಗೊ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಣೆಯಾದ ಹಿನ್ನೆಲೆ ಮುಂಬರುವ ಆವೃತ್ತಿಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಟಿಕೆಟ್ ದರ ಏರಿಕೆಯಾಗಲಿದೆ.
ಕ್ಯಾಸಿನೊ, ರೇಸ್ ಕ್ಲಬ್ ಸೇರಿದಂತೆ ಐಪಿಎಲ್ ರೀತಿಯ ಆಟಗಳ ಟಿಕೆಟ್‌ಗೆ ಶೇ 40 ರಷ್ಟು ತೆರಿಗೆ ವಿಧಿಸಿ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಐಪಿಎಲ್ ಟಿಕೆಟ್‌ಗಳ ಬೆಲೆ ₹500 ಇದ್ದರೆ, ಇದಕ್ಕೆ ಈ ಹಿಂದೆ ಇದ್ದ ಶೇ 28 ಜಿಎಸ್‌ಟಿ ಸೇರಿದರೆ ₹640 ಆಗುತ್ತಿತ್ತು. ಈಗ ಶೇ 40ರಷ್ಟು ತೆರಿಗೆ ವಿಧಿಸಿದ ಹಿನ್ನೆಲೆ ಟಿಕೆಟ್ ದರ ₹700 ಆಗಲಿದೆ.
ಹೊಸ ನಿಯಮದ ಪ್ರಕಾರ, ದೇಶದಲ್ಲಿ ನೋಂದಣಿಯಾಗಿರುವ ಆಟಗಳಿಗೆ ಟಿಕೆಟ್ ದರ ₹500ರ ಇದ್ದರೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ₹500ಕ್ಕಿಂತ ಹೆಚ್ಚಿದ್ದರೆ ಶೇ 18ರಷ್ಟು ತೆರಿಗೆ ಇರಲಿದೆ.
ಐಪಿಎಲ್ ಅನ್ನು ಐಷಾರಾಮಿ ಸರಕುಗಳ ವಿಭಾಗಕ್ಕೆ ಸೇರಿಸಿರುವುದರಿಂದ ಹೆಚ್ಚಿನ ತೆರಿಗೆ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.