ADVERTISEMENT

‘ತೆರಿಗೆ ಸ್ಲ್ಯಾಬ್ ಬದಲಾವಣೆ: ನಡೆದಿಲ್ಲ ಪರಿಶೀಲನೆ’

ಪಿಟಿಐ
Published 19 ಏಪ್ರಿಲ್ 2022, 14:22 IST
Last Updated 19 ಏಪ್ರಿಲ್ 2022, 14:22 IST

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ಪ್ರಮಾಣವನ್ನು ಸರಳಗೊಳಿಸುವ ಪರಿಶೀಲನೆ ನಡೆಸುತ್ತಿರುವ ಸಚಿವರ ಸಮಿತಿಯು, ಶೇಕಡ 5ರ ತೆರಿಗೆ ಸ್ಲ್ಯಾಬ್‌ಅನ್ನು ಶೇ 8ಕ್ಕೆ ಹೆಚ್ಚಿಸುವ ದಿಕ್ಕಿನಲ್ಲಿ ಮುಂದಡಿ ಇರಿಸಿಲ್ಲ ಎಂದು ಮೂಲಗಳು ಹೇಳಿವೆ.

ಏಳು ಸಚಿವರ ಸಮಿತಿಗೆ ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷರು. ಜಿಎಸ್‌ಟಿ ವ್ಯವಸ್ಥೆಯಲ್ಲಿ ಕನಿಷ್ಠ ತೆರಿಗೆ ಪ್ರಮಾಣವನ್ನು ಈಗಿನ ಶೇ 5ರಿಂದ, ಶೇ 8ಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಸಮಿತಿಯು ಪರಿಶೀಲನೆಗೇ ಎತ್ತಿಕೊಂಡಿಲ್ಲ ಎಂದು ಮೂಲಗಳು ವಿವರಿಸಿವೆ.

ಈ ಸಮಿತಿ ನೀಡುವ ಶಿಫಾರಸನ್ನು ಜಿಎಸ್‌ಟಿ ಮಂಡಳಿ ಮುಂದೆ ಇರಿಸಲಾಗುತ್ತದೆ. ಜಿಎಸ್‌ಟಿ ಮಂಡಳಿ ಸಭೆಯು ಮೇ 15ರ ನಂತರ ನಡೆಯುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.