ADVERTISEMENT

ಇ–ವೇ ಬಿಲ್ ವಂಚನೆ ತಡೆಗೆ ಹೊಸ ಕ್ರಮ

ಪಿಟಿಐ
Published 18 ಏಪ್ರಿಲ್ 2021, 16:38 IST
Last Updated 18 ಏಪ್ರಿಲ್ 2021, 16:38 IST

ನವದೆಹಲಿ: ಇ–ವೇ ಬಿಲ್ ಇಲ್ಲದೆ ಸಾಗುವ ವಾಹನಗಳ ಬಗ್ಗೆ ಜಿಎಸ್‌ಟಿ ಅಧಿಕಾರಿಗಳಿಗೆ ತಕ್ಷಣದ ಮಾಹಿತಿ ರವಾನೆ ಆಗುವ ವ್ಯವಸ್ಥೆ ರೂಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

₹ 50 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಸರಕುಗಳ ಅಂತರರಾಜ್ಯ ಸಾಗಾಟಕ್ಕೆ ಇ–ವೇ ಬಿಲ್ ಕಡ್ಡಾಯ. ಆದರೆ, ಚಿನ್ನದ ಸಾಗಣೆಗೆ ಇದರಿಂದ ವಿನಾಯಿತಿ ಇದೆ. ಈ ವ್ಯವಸ್ಥೆಯ ಅಡಿಯಲ್ಲಿ ವಾಣಿಜ್ಯ ಸಂಸ್ಥೆಗಳು ಮತ್ತು ಸರಕು ಸಾಗಣೆದಾರರು ಜಿಎಸ್‌ಟಿ ಇನ್‌ಸ್ಪೆಕ್ಟರ್‌ ಕೇಳಿದಾಗ ಇ–ವೇ ಬಿಲ್ ತೋರಿಸಬೇಕು.

ಜನವರಿ 1ರಿಂದ ಅನ್ವಯ ಆಗುವಂತೆ ಕೇಂದ್ರ ಸರ್ಕಾರವು ಆರ್‌ಎಫ್‌ಐಡಿ/ಫಾಸ್ಟ್‌ಟ್ಯಾಗ್‌ಅನ್ನು ಇ–ವೇ ಬಿಲ್ ವ್ಯವಸ್ಥೆ ಜೊತೆ ಜೋಡಿಸಿದೆ. ಸರಕು ಸಾಗಣೆದಾರರು ತಮ್ಮ ವಾಹನಗಳಲ್ಲಿ ಆರ್‌ಎಫ್‌ಐಡಿ ಹೊಂದಿರಬೇಕು. ಇ–ವೇ ಬಿಲ್‌ನ ವಿವರವನ್ನು ಆರ್‌ಎಫ್‌ಐಡಿಗೆ ಅ‍ಪ್ಲೋಡ್ ಮಾಡಲಾಗುತ್ತದೆ.

ADVERTISEMENT

ಸರಕು ಸಾಗಣೆ ವಾಹನವು ಹೆದ್ದಾರಿಗಳಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ ಗುರುತಿಸುವ ಸಾಧನವನ್ನು ಹಾದುಹೋದಾಗ, ಅದರಲ್ಲಿ ಇರುವ ಇ–ವೇ ಬಿಲ್ ಕುರಿತ ವಿವರವು ಸರ್ಕಾರದ ವೆಬ್‌ಸೈಟ್‌ಗೆ ರವಾನೆ ಆಗುತ್ತದೆ. ಈ ಮಾಹಿತಿಯನ್ನು ಕಂದಾಯ ಅಧಿಕಾರಿಗಳು, ಜಿಎಸ್‌ಟಿ ವ್ಯವಸ್ಥೆಯಡಿ ನೋಂದಣಿ ಮಾಡಿಕೊಂಡು ವ್ಯಕ್ತಿಯು ಪೂರೈಸಿದ ಸರಕುಗಳ ವಿವರದ ಜೊತೆ ತಾಳೆ ಮಾಡಿ ನೋಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.