ನವದೆಹಲಿ: ಭೌತಿಕ ಮಳಿಗೆಗಳ ಮೂಲಕ ರಿಟೇಲ್ ಮಾರಾಟದಲ್ಲಿ ತೊಡಗಿರುವವರು ಜಿಎಸ್‌ಟಿ ದರ ಇಳಿಕೆಯಿಂದಾಗಿ ಉತ್ಪನ್ನಗಳ ಬೆಲೆಯಲ್ಲಿ ಆಗುವ ಇಳಿಕೆಯನ್ನು ಗ್ರಾಹಕರಿಗೆ ಗೊತ್ತಾಗುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸೂಚಿಸಿದೆ.
ರಿಟೇಲ್ ವಹಿವಾಟಿನಲ್ಲಿ ತೊಡಗಿರುವವರ ಸಂಘಕ್ಕೆ ಸೂಚನೆಯೊಂದನ್ನು ರವಾನಿಸಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು (ಡಿಪಿಐಐಟಿ), ರಿಟೇಲ್ ವಹಿವಾಟಿನಲ್ಲಿ ತೊಡಗಿರುವವರು ಜಿಎಸ್‌ಟಿಯಲ್ಲಿ ಆಗಿರುವ ಇಳಿಕೆಯನ್ನು ರಸೀದಿಯಲ್ಲಿ ಜಿಎಸ್‌ಟಿ ರಿಯಾಯಿತಿ ಎಂಬುದಾಗಿ ನಮೂದಿಸಬೇಕು ಎಂದು ಹೇಳಿದೆ.
‘ಜಿಎಸ್‌ಟಿಯಿಂದಾಗಿನ ರಿಯಾಯಿತಿಯನ್ನು ಪ್ರಮುಖವಾಗಿ ತೋರಿಸಬೇಕು. ಉದಾಹರಣೆಗೆ, ಪೋಸ್ಟರ್‌ಗಳು, ಫ್ಲೈಯರ್‌ಗಳು ಹಾಗೂ ಜಾಹೀರಾತುಗಳ ಮೂಲಕ (ಟಿ.ವಿ., ಮುದ್ರಣ ಮತ್ತು ಆನ್‌ಲೈನ್ ಮಾಧ್ಯಮ) ತಿಳಿಸಬೇಕು’ ಎಂದು ಅದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.