ADVERTISEMENT

ಹಟ್ಟಿ: 6 ತಿಂಗಳಲ್ಲಿ 827 ಕೆ.ಜಿ ಚಿನ್ನ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 16:49 IST
Last Updated 19 ಅಕ್ಟೋಬರ್ 2019, 16:49 IST

ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯು 6 ತಿಂಗಳ ಅವಧಿಯಲ್ಲಿ 827 ಕೆ.ಜಿ ಚಿನ್ನ ಉತ್ಪಾದಿಸಿ ಶೇ 98ರಷ್ಟು ಪ್ರಗತಿ ಸಾಧಿಸಿದೆ.

2019ರ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ 3.25 ಲಕ್ಷ ಟನ್ ಅದಿರು ಹೊರತೆಗೆದು 835 ಕೆ.ಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಿತ್ತು. ಆದರೆ, 827 ಕೆ.ಜಿ ಚಿನ್ನ ಉತ್ಪಾದಿಸಲು ಮಾತ್ರ ಸಾಧ್ಯವಾಗಿದ್ದು 8 ಕೆ.ಜಿಯಷ್ಟು ಕೊರತೆ ಕಂಡು ಬಂದಿದೆ.

‘ಅಧಿಕಾರಿಗಳ ಹಾಗೂ ಕಾರ್ಮಿಕರ ಪರಿಶ್ರಮದಿಂದ ಚಿನ್ನದ ಉತ್ಪಾದನೆಯಲ್ಲಿ ಶೇ 98ರಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ವಾರ್ಷಿಕ ಗುರಿ 1670 ಕೆ.ಜಿಗೂ ಹೆಚ್ಚು ಚಿನ್ನ ಉತ್ಪಾದಿಸುವ ವಿಶ್ವಾಸವಿದೆ’ ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಹಿರಿಯ ವ್ಯವಸ್ಥಾಪಕ ಯಮನೂರಪ್ಪ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.