ADVERTISEMENT

ಎಚ್‌ಸಿಎಲ್‌ ತೆಕ್ಕೆಗೆ ಆಸ್ಟ್ರೇಲಿಯಾದ ಕಂಪನಿ

ಪಿಟಿಐ
Published 21 ಸೆಪ್ಟೆಂಬರ್ 2020, 19:31 IST
Last Updated 21 ಸೆಪ್ಟೆಂಬರ್ 2020, 19:31 IST

ನವದೆಹಲಿ: ಆಸ್ಟ್ರೇಲಿಯಾದ ಮಾಹಿತಿ ತಂತ್ರಜ್ಞಾನ ವಲಯದ ಡಿಡಬ್ಲ್ಯೂಎಸ್ ಕಂಪನಿಯನ್ನು ಸ್ವಾಧೀನ ಮಾಡಿಕೊಳ್ಳುವುದಾಗಿ ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿ ತಿಳಿಸಿದೆ.

ಡಿಡಬ್ಲ್ಯೂಎಸ್‌ ಸ್ವಾಧೀನ ಮಾಡಿಕೊಳ್ಳುವುದರಿಂದ ಎಚ್‌ಸಿಎಲ್‌ಗೆ‌, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಮಾರುಕಟ್ಟೆಗಳಲ್ಲಿ ಹಿಡಿತ ಗಟ್ಟಿ ಮಾಡಿಕೊಳ್ಳಲು ಸಹಾಯವಾಗುತ್ತದೆ ಎನ್ನಲಾಗಿದೆ. ಒಟ್ಟು ₹ 850.33 ಕೋಟಿ ಪಾವತಿಸಿ ಈ ಕಂಪನಿಯನ್ನು ಎಚ್‌ಸಿಎಲ್‌ ಖರೀದಿಸುತ್ತಿದೆ. ಡಿಸೆಂಬರ್‌ ವೇಳೆಗೆ ಖರೀದಿ ಪ್ರಕ್ರಿಯೆ ಪೂರ್ಣವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT