ADVERTISEMENT

ಮೌಲ್ಯಯುತ ಕಂಪನಿ: ಎರಡನೇ ಸ್ಥಾನಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್

ಪಿಟಿಐ
Published 20 ಜುಲೈ 2023, 16:47 IST
Last Updated 20 ಜುಲೈ 2023, 16:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮುಂಬೈ ಷೇರುಪೇಟೆಯ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ದೇಶದ ಅತಿದೊಡ್ಡ ಕಂಪನಿಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಗುರುವಾರ ಏರಿಕೆ ಕಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಮೂರನೇ ಸ್ಥಾನಕ್ಕೆ ಇಳಿಕೆ ಕಂಡಿದೆ.

ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು ₹12.72 ಲಕ್ಷ ಕೋಟಿಗೆ ತಲುಪಿತು. ಟಿಸಿಎಸ್‌ನ ಮಾರುಕಟ್ಟೆ ಮೌಲ್ಯಕ್ಕಿಂತಲೂ ₹5,826.95 ಕೋಟಿ ಹೆಚ್ಚು ಇದು. ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹12.66 ಲಕ್ಷ ಕೋಟಿ ಇದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರು ಮೌಲ್ಯವು ಬಿಎಸ್‌ಇನಲ್ಲಿ ಶೇ 0.22ರಷ್ಟು ಹೆಚ್ಚಾಗಿ ₹1,688.50ಕ್ಕೆತಲುಪಿತು. ಟಿಸಿಎಸ್ ಷೇರು ಮೌಲ್ಯ ಶೇ 0.25ರಷ್ಟು ಇಳಿಕೆ ಕಂಡು ₹3,462ಕ್ಕೆ ತಲುಪಿತು.

ADVERTISEMENT

ಅತ್ಯಂತ ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮೊದಲ ಸ್ಥಾನದಲ್ಲಿದೆ. ಇದರ ಮಾರುಕಟ್ಟೆ ಮೌಲ್ಯವು ₹17.72 ಲಕ್ಷ ಕೋಟಿ.

ಐಟಿಸಿ ಮೌಲ್ಯ ವೃದ್ಧಿ: ಐಟಿಸಿ ಷೇರು ಮೌಲ್ಯವು ಗುರುವಾರ ಶೇ 3ರವರೆಗೆ ಏರಿಕೆ ಕಂಡಿತು. ಇದರಿಂದಾಗಿ ಮಾರುಕಟ್ಟೆ ಮೌಲ್ಯವು ₹17,124 ಕೋಟಿಯಷ್ಟು ಹೆಚ್ಚಾಗಿ ₹6.12 ಲಕ್ಷ ಕೋಟಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.