ADVERTISEMENT

ಆರೋಗ್ಯ ವಿಮೆ ವ್ಯಾಪ್ತಿಗೆ ‘ಕೋವಿಡ್‌’ ಪರಿಹಾರ

ಪಿಟಿಐ
Published 5 ಮಾರ್ಚ್ 2020, 19:27 IST
Last Updated 5 ಮಾರ್ಚ್ 2020, 19:27 IST
   

ಮುಂಬೈ: ಬಹುತೇಕ ಎಲ್ಲ ಆರೋಗ್ಯ ವಿಮೆ ಪಾಲಿಸಿಗಳು ‘ಕೋವಿಡ್‌–19’ ಒಳಗೊಂಡಂತೆ ಸಾಂಕ್ರಾಮಿಕ ಕಾಯಿಲೆಗಳಿಗೆ ಪರಿಹಾರ ಒದಗಿಸುವ ಸೌಲಭ್ಯ ಒಳಗೊಂಡಿವೆ ಎಂದು ಸಾಮಾನ್ಯ ವಿಮೆ ಮಂಡಳಿ ತಿಳಿಸಿದೆ.

ಸಾಮಾನ್ಯ ವಿಮೆ ಕಂಪನಿಗಳು ತಮ್ಮ ಹಾಲಿ ಪಾಲಿಸಿಗಳಲ್ಲಿ ‘ಕೋವಿಡ್‌–19’ ಪ್ರಕರಣಗಳಿಗೆ ಪರಿಹಾರ ಒದಗಿಸಬೇಕು. ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಬುಧವಾರ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ 44 ಸಾಮಾನ್ಯ ವಿಮೆ ಕಂಪನಿಗಳ ಉನ್ನತ ಮಂಡಳಿಯು ಈ ವಿವರಣೆ ನೀಡಿದೆ.

‘ಸದ್ಯ ಜಾರಿಯಲ್ಲಿ ಇರುವ ಆರೋಗ್ಯ ವಿಮೆಗಳಲ್ಲಿ ಎಲ್ಲ ಬಗೆಯ ಸಾಂಕ್ರಾಮಿಕ ಕಾಯಿಲೆಗಳಿಗೆ ವಿಮೆ ಸೌಲಭ್ಯ ಇದೆ’ ಎಂದು ಮಂಡಳಿಯ ಅಧ್ಯಕ್ಷ ಎ. ವಿ. ಗಿರಿಜಾ ಕುಮಾರ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.