ADVERTISEMENT

ಹೂಡಿಕೆ ತಗ್ಗಿಸಲಿದೆ ಹೀರೊ ಮೋಟೊಕಾರ್ಪ್‌

ಪಿಟಿಐ
Published 22 ಸೆಪ್ಟೆಂಬರ್ 2019, 16:45 IST
Last Updated 22 ಸೆಪ್ಟೆಂಬರ್ 2019, 16:45 IST
   

ನವದೆಹಲಿ: ವಾಹನ ಮಾರಾಟ ಕುಸಿತ ಕಾಣುತ್ತಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಬಂಡವಾಳ ಹೂಡಿಕೆ ಮಾಡುವುದಾಗಿ ಹೀರೊ ಮೋಟೊಕಾರ್ಪ್‌ ಕಂಪನಿ ತಿಳಿಸಿದೆ.

2018–19ರಲ್ಲಿ ₹ 700 ಕೋಟಿ ಹೂಡಿಕೆ ಮಾಡಲಾಗಿತ್ತು. ಈ ಬಾರಿ ₹1,500 ಹೂಡಿಕೆ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಮಾರಾಟ ಕಡಿಮೆ ಆಗುತ್ತಿರುವುದರಿಂದ ಹೂಡಿಕೆ ಮೊತ್ತದಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದೆ. ‘ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ’ ಎಂದು ಕಂಪನಿಯ ಸಿಎಫ್‌ಒ ನಿರಂಜನ್‌ ಗುಪ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT