ADVERTISEMENT

ತೈಲ ಬೆಲೆ ಹೆಚ್ಚಳ ಆರ್ಥಿಕ ಚೇತರಿಕೆಗೆ ಅಡ್ಡಿ: ಒಪೆಕ್‌ ಒಕ್ಕೂಟ

ಪಿಟಿಐ
Published 20 ಅಕ್ಟೋಬರ್ 2021, 16:45 IST
Last Updated 20 ಅಕ್ಟೋಬರ್ 2021, 16:45 IST

ನವದೆಹಲಿ: ತೈಲ ಬೆಲೆಯು ಭಾರಿ ಪ್ರಮಾಣದಲ್ಲಿ ಇರುವುದು ವಿಶ್ವದ ಆರ್ಥಿಕ ಚೇತರಿಕೆಗೆ ಅಡ್ಡಿ ಉಂಟುಮಾಡುತ್ತದೆ ಎಂದು ಭಾರತವು ಬುಧವಾರ ಎಚ್ಚರಿಸಿದೆ. ತೈಲ ಬೆಲೆಯು ಕೈಗೆಟಕುವಂತೆ, ತೈಲ ಪೂರೈಕೆಯು ವಿಶ್ವಾಸಾರ್ಹವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೌದಿ ಅರೇಬಿಯಾ ಮತ್ತು ಒಪೆಕ್‌ ಒಕ್ಕೂಟದ ಇತರ ರಾಷ್ಟ್ರಗಳಿಗೆ ಕರೆ ನೀಡಿದೆ.

‘ತೈಲ ಬೆಲೆಯು ಹೆಚ್ಚಿನ ಮಟ್ಟದಲ್ಲಿಯೇ ಮುಂದುವರಿದರೆ ಆರ್ಥಿಕ ಚೇತರಿಕೆಗೆ ಅಡ್ಡಿಯಾಗುತ್ತದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತವು 2020ರ ಜೂನ್‌ನಲ್ಲಿ 8.8 ಬಿಲಿಯನ್ ಅಮೆರಿಕನ್ ಡಾಲರ್ (₹ 65 ಸಾವಿರ ಕೋಟಿ) ವೆಚ್ಚ ಮಾಡುತ್ತಿತ್ತು. ಈಗ ಆ ಮೊತ್ತವು 24 ಬಿಲಿಯನ್ ಅಮೆರಿಕನ್ ಡಾಲರ್‌ಗೆ (₹ 1.79 ಲಕ್ಷ ಕೋಟಿ) ಆಗಿದೆ. ಇದಕ್ಕೆ ಕಾರಣ ತೈಲ ಬೆಲೆಯಲ್ಲಿ ಆಗಿರುವ ಹೆಚ್ಚಳ ಎಂದು ಪುರಿ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.