ADVERTISEMENT

ಸೌರ ವಿದ್ಯುತ್‌ ಪೂರೈಕೆಗೆ ಹಿಂದೂಸ್ತಾನ್‌ ಪವರ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 16:12 IST
Last Updated 3 ಏಪ್ರಿಲ್ 2025, 16:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಉತ್ತರ ಪ್ರದೇಶದ ವಿದ್ಯುತ್ ಕಾರ್ಪೊರೇಷನ್‌ ಲಿಮಿಟೆಡ್‌ನೊಟ್ಟಿಗೆ (ಯುಪಿಪಿಸಿಎಲ್‌) 425 ಮೆಗಾವಾಟ್‌ ಸೌರ ವಿದ್ಯುತ್ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹಿಂದೂಸ್ತಾನ್‌ ಪವರ್ ಗುರುವಾರ ತಿಳಿಸಿದೆ.

ಈ ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ ಯುಪಿಪಿಸಿಎಲ್ 25 ವರ್ಷದವರೆಗೆ ಸ್ಥಿರ ದರದಲ್ಲಿ ವಿದ್ಯುತ್ ಖರೀದಿಸಲಿದೆ. ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕದಿಂದ 24 ತಿಂಗಳೊಳಗೆ ಯೋಜನೆಯು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

‘2028ರ ವೇಳೆಗೆ 5 ಗಿಗಾವಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ  ಹೊಂದಲಾಗಿದೆ. 425 ಮೆಗಾವಾಟ್‌ ಸೌರ ವಿದ್ಯುತ್ ಪೂರೈಕೆ ಒಪ್ಪಂದವು ಕಂಪನಿಯನ್ನು ಸದೃಢಗೊಳಿಸಲಿದೆ. ದೇಶದ ನವೀಕರಿಸಬಹುದಾದ ಇಂಧನ ಗುರಿಗೆ ಇದು ಪೂರಕವಾಗಿದೆ’ ಎಂದು ಹಿಂದೂಸ್ತಾನ್ ಪವರ್‌ನ ಅಧ್ಯಕ್ಷ ರತುಲ್‌ ಪುರಿ ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.