ADVERTISEMENT

ಹಿಂದೂಸ್ತಾನ್‌ ಯೂನಿಲಿವರ್ ಲಿಮಿಟೆಡ್‌ ಲಾಭ ದುಪ್ಪಟ್ಟು

ಪಿಟಿಐ
Published 12 ಫೆಬ್ರುವರಿ 2026, 15:49 IST
Last Updated 12 ಫೆಬ್ರುವರಿ 2026, 15:49 IST
<div class="paragraphs"><p>ಹಿಂದೂಸ್ತಾನ್‌ ಯೂನಿಲಿವರ್ ಲಿಮಿಟೆಡ್‌</p></div>

ಹಿಂದೂಸ್ತಾನ್‌ ಯೂನಿಲಿವರ್ ಲಿಮಿಟೆಡ್‌

   

ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ತಯಾರಿಕಾ ಕಂಪನಿ ಹಿಂದೂಸ್ತಾನ್‌ ಯೂನಿಲಿವರ್ ಲಿಮಿಟೆಡ್‌ (ಎಚ್‌ಯುಎಲ್‌) ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ₹6,603 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹2,989 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ಕಂಪನಿ ಷೇರುಪೇಟೆಗೆ ಗುರುವಾರ ತಿಳಿಸಿದೆ.

ADVERTISEMENT

ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು, ತನ್ನ ಐಸ್‌ ಕ್ರೀಮ್‌ ವ್ಯವಹಾರವನ್ನು ಪ್ರತ್ಯೇಕಗೊಳಿಸಿ, ಕ್ವಾಲಿಟಿ ವಾಲ್ಸ್‌ (ಇಂಡಿಯಾ) ಲಿಮಿಟೆಡ್‌ ಅನ್ನು ರಚಿಸಿದೆ. ಇದು ಲಾಭ ಹೆಚ್ಚಳಕ್ಕೆ ಒಂದು ಕಾರಣ ಎಂದು ತಿಳಿಸಿದೆ.

ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನದಿಂದ ಕಂಪನಿಯು ₹576 ಕೋಟಿಯನ್ನು ಹೆಚ್ಚುವರಿಯಾಗಿ ವ್ಯಯಿಸಿದೆ.

ಕಂಪನಿಯ ವರಮಾನದಲ್ಲಿ ಶೇ 5ರಷ್ಟು ಹೆಚ್ಚಳವಾಗಿದ್ದು, ₹16,580 ಕೋಟಿಯಾಗಿದೆ. ವೆಚ್ಚದಲ್ಲಿ ಶೇ 6.37ರಷ್ಟು ಏರಿಕೆಯಾಗಿದ್ದು, ₹13,078 ಕೋಟಿಯಷ್ಟಾಗಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.