ADVERTISEMENT

ಹುಂಡೈನಿಂದ ನೀರು ಉಳಿತಾಯದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 16:42 IST
Last Updated 19 ನವೆಂಬರ್ 2021, 16:42 IST

ಬೆಂಗಳೂರು: ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಕಂಪನಿಯು ನವೆಂಬರ್ 22ರಿಂದ ಡಿಸೆಂಬರ್ 6ರವರೆಗೆ ನೀರು ಉಳಿತಾಯ ಮಾಡುವ ಅಭಿಯಾನವೊಂದನ್ನು ನಡೆಸಲಿದೆ. ಇದರ ಅಡಿಯಲ್ಲಿ ಕಂಪನಿಯು, ತನ್ನ ಗ್ರಾಹಕರು ಸರ್ವಿಸಿಂಗ್‌ಗೆ ಬಂದಾಗ ಅವರುಕಾರನ್ನು ಡ್ರೈವಾಶ್‌ ಮಾಡಿಸಲು ಪ್ರೋತ್ಸಾಹ ನೀಡಲಿದೆ.

‘ಈ ಅಭಿಯಾನದ ಮೂಲಕ ನಾವು ನಮ್ಮ ಗ್ರಾಹಕರಿಗೆ ನೀರನ್ನು ಬಳಸದೆಯೇ ಕಾರು ತೊಳೆಸುವಂತೆ ಪ್ರೇರಣೆ ನೀಡಲಿದ್ದೇವೆ’ ಎಂದು ಕಂಪನಿಯ ಮಾರಾಟ, ಮಾರುಕಟ್ಟೆ ಮತ್ತು ಸೇವಾ ವಿಭಾಗದ ನಿರ್ದೇಶಕ ತರುಣ್ ಗರ್ಗ್ ಅವರು ತಿಳಿಸಿದ್ದಾರೆ.

ಈ ಅಭಿಯಾನದಲ್ಲಿ ಪಾಲ್ಗೊಳ್ಳುವ, ನೂರು ಅದೃಷ್ಟಶಾಲಿ ವಿಜೇತರಿಗೆ ಕಂಪನಿಯು ₹ 1,000 ಮೌಲ್ಯದ ಅಮೆಜಾನ್ ವೋಚರ್ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.