ADVERTISEMENT

ಹೋಂಡಾ: ಸೀಮಿತ ಆವೃತ್ತಿಯ ಆ್ಯಕ್ಟಿವಾ 5ಜಿ, ಸಿಬಿ ಶೈನ್‌ ಪೇಟೆಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 16:36 IST
Last Updated 2 ಜುಲೈ 2019, 16:36 IST

ನವದೆಹಲಿ: ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ತನ್ನ ಹೊಸ ಆಕರ್ಷಕ ಆ್ಯಕ್ಟಿವಾ 5ಜಿ ಮತ್ತು ಸಿಬಿ ಶೈನ್‌ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಗ್ರಾಹಕರ ಬಗೆಗಿನ ನಮ್ಮ ಬದ್ಧತೆಯು ಹೋಂಡಾವನ್ನು ಅತ್ಯಂತ ವಿಶ್ವಾಸಾರ್ಹ ದ್ವಿಚಕ್ರ ವಾಹನ ಬ್ರ್ಯಾಂಡ್‌ ಆಗಿ ರೂಪಿಸಿದೆ’ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಯದುವೇಂದ್ರ ಸಿಂಗ್‌ ಗುಲೇರಿಯಾ ತಿಳಿಸಿದ್ದಾರೆ.

ಸೀಮಿತ ಆವೃತ್ತಿಯ ಆ್ಯಕ್ಟಿವಾ 5ಜಿ ಹತ್ತು ಹೊಸ ಪ್ರೀಮಿಯಂ ಶೈಲಿಯನ್ನು ಹೆಚ್ಚುವರಿಯಾಗಿ ಹೊಂದಿದೆ. ಆ್ಯಕ್ಟಿವಾ 5ಜಿ ಮತ್ತು ಸಿಬಿ ಶೈನ್‌ ಎರಡು ಪ್ರತ್ಯೇಕ ಬಣ್ಣಗಳಲ್ಲಿ ಲಭ್ಯ ಇರಲಿವೆ. ಆ್ಯಕ್ಟಿವಾ 5ಜಿ ದೆಹಲಿ ಎಕ್ಸ್‌ಷೋರೂಂ ಬೆಲೆ ₹ 55,032 ಮತ್ತು ಸಿಬಿ ಶೈನ್‌ ಬೆಲೆ ₹59,083 ರಿಂದ ಆರಂಭವಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.