ಬೆಂಗಳೂರು: ವಾಣಿಜ್ಯ ಪೈಲಟ್ ಆಗುವ ಯುವತಿಯರ ಕನಸು ನನಸಾಗಿಸಲು ಹೋಂಡಾ ಮೋಟರ್ ಸೈಕಲ್ಸ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ‘ಸಪ್ನೋ ಕಿ ಉಡಾನ್’ ವಿಶಿಷ್ಟ ಯೋಜನೆ ಪ್ರಕಟಿಸಿದೆ.
ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ (ಸಿಎಸ್‌ಆರ್), ವಾಣಿಜ್ಯ ಪೈಲಟ್ ಕೋರ್ಸ್ ಕಲಿಯುವ 20 ಅರ್ಹ ಯುವತಿಯರಿಗೆ ವಿದ್ಯಾರ್ಥಿ ವೇತನ ನೀಡಲಿದೆ. 18 ತಿಂಗಳ ಅವಧಿಯ ತರಬೇತಿಯ ಸಂಪೂರ್ಣ ವೆಚ್ಚವನ್ನು ಭರಿಸಲಿದೆ. ರಾಜ್ಯದ ಐವರನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಆಗಸ್ಟ್ 10 ಕೊನೆಯ ದಿನ. ವಿವರಗಳನ್ನು pilotadmission@teamleaseuniversity.ac.in ವಿಳಾಸಕ್ಕೆ ಕಳಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.