ADVERTISEMENT

ಕೈಗೆಟುಕುವ ದರಕ್ಕೆ ಫ್ಲ್ಯಾಟ್‌ ಲಭ್ಯತೆ ಕುಸಿತ: ಆರ್‌ಬಿಐ

ಪಿಟಿಐ
Published 11 ಜುಲೈ 2019, 19:45 IST
Last Updated 11 ಜುಲೈ 2019, 19:45 IST
   

ಮುಂಬೈ: ದೇಶದ ಪ್ರಮುಖ ನಗರಗಳಲ್ಲಿ ಜನರ ಖರೀದಿ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗ್ಗದ ದರದಲ್ಲಿ ಫ್ಲ್ಯಾಟ್‌ಗಳು ಲಭ್ಯವಾಗುತ್ತಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸಮೀಕ್ಷೆ ತಿಳಿಸಿದೆ.

ಜನರು ಖರೀದಿಸಬಹುದಾದ ಬೆಲೆಗೆ ಲಭ್ಯ ಇರುವ ಫ್ಲ್ಯಾಟ್‌ಗಳ ಸಂಖ್ಯೆಯು ಮುಂಬೈ ಮಹಾನಗರದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಇವೆ. ಭುವನೇಶ್ವರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಲಭ್ಯ ಇವೆ.

ಖರೀದಿದಾರರ ಆದಾಯಕ್ಕೆ ಅನುಗುಣವಾಗಿ ಲಭ್ಯ ಇರುವ ಫ್ಲ್ಯಾಟ್‌ಗಳ ಸಂಖ್ಯೆಯು ನಾಲ್ಕು ವರ್ಷಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಇದಕ್ಕೆ ಫ್ಲ್ಯಾಟ್‌ಗಳ ಬೆಲೆ ಮತ್ತು ಆದಾಯದ ಅನುಪಾತವು 56:1 ರಿಂದ 61;5 ಏರಿಕೆಯಾಗಿರುವುದೇ ಕಾರಣ ಎಂದು ಆರ್‌ಬಿಐ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಗೃಹ ಸಾಲ ಮರು ಪಾವತಿಸದ ಪ್ರಕರಣಗಳಲ್ಲಿ ಉದ್ಭವಿಸುವ ಹಣಕಾಸು ಸಂಸ್ಥೆ ಮತ್ತು ಬ್ಯಾಂಕ್‌ಗಳ ನಷ್ಟ ಸಾಧ್ಯತೆಯು 2015ರಿಂದ 2019ರ ಅವಧಿಯಲ್ಲಿ ಶೇ 67.7 ರಿಂದ ಶೇ 69.6ಕ್ಕೆ ಏರಿಕೆಯಾಗಿದೆ. ಖರೀದಿದಾರರ ಸಾಮರ್ಥ್ಯಕ್ಕೆ ಅನುಗುಣವಾದ ಫ್ಲ್ಯಾಟ್‌ಗಳು ಲಭ್ಯವಾಗದಿರಲು ಇದು ಕೂಡ ಕಾರಣವಾಗಿದೆ.

ಬಹುತೇಕ ನಗರಗಳಲ್ಲಿ ಗೃಹ ಸಾಲ ಪಡೆಯುವ ಆದಾಯದ ಅರ್ಹತೆಯು 2 ವರ್ಷಗಳಿಂದ ಸ್ಥಿರವಾಗಿದೆ. ಮುಂಬೈ, ಪುಣೆ ಮತ್ತು ಅಹಮದಾಬಾದ್‌ಗಳಲ್ಲಿ ಈ ಅರ್ಹತೆಯು ಹೆಚ್ಚಿನ ಮಟ್ಟದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.