‘ಹುಡ್ಕೊ
ನವದೆಹಲಿ: ಷೇರುಗಳಾಗಿ ಪರಿವರ್ತಿಸಲಾಗದ ಸಾಲದ ಪತ್ರಗಳ (ಎನ್‌ಸಿಡಿ) ಹಂಚಿಕೆ ಮೂಲಕ ₹3 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಯೋಜಿಸಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಹುಡ್ಕೊ) ತಿಳಿಸಿದೆ.
ಬಂಡವಾಳ ಸಂಗ್ರಹಿಸಲು ಬಾಂಡ್ ಹಂಚಿಕೆ ಸಮಿತಿ ಅನುಮತಿ ನೀಡಿದೆ ಎಂದು ಹುಡ್ಕೊ ಷೇರುಪೇಟೆಗೆ ತಿಳಿಸಿದೆ. ಹುಡ್ಕೊ ವಸತಿ ಮತ್ತು ನಗರದ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸಿನ ನೆರವನ್ನು ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.