ADVERTISEMENT

ಹುಂಡೈ ವರ್ನಾ ಹೊಸ ಅವತರಣಿಗೆ ಬಿಡುಗಡೆ

ಪಿಟಿಐ
Published 21 ಮೇ 2020, 19:45 IST
Last Updated 21 ಮೇ 2020, 19:45 IST
ಕಂಪನಿಯ ಸಿಇಒ ಎಸ್‌.ಎಸ್‌. ಕಿಮ್‌ ಅವರು ಹೊಸ ವರ್ನಾ ಜತೆಗೆ
ಕಂಪನಿಯ ಸಿಇಒ ಎಸ್‌.ಎಸ್‌. ಕಿಮ್‌ ಅವರು ಹೊಸ ವರ್ನಾ ಜತೆಗೆ   

ನವದೆಹಲಿ: ಹುಂಡೈ ಮೋಟರ್‌ ಇಂಡಿಯಾ ಕಂಪನಿಯು ತನ್ನ ಮಧ್ಯಮ ಗಾತ್ರದ ಸೆಡಾನ್‌ ವರ್ನಾದ ಹೊಸ ಅವತರಣಿಕೆ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಎಕ್ಸ್‌ ಷೋರೂಂ ಬೆಲೆ ₹ 9.3 ಲಕ್ಷದಿಂದ ₹ 15.09 ಲಕ್ಷದವರೆಗಿದೆ.

ಸ್ಪಿರಿಟೆಡ್‌ ನ್ಯೂ ವರ್ನಾ ಎಂದು ಹೆಸರಿಡಲಾಗಿದ್ದು, ಬಿಎಸ್‌–6 ಮಾನದಂಡಕ್ಕೆ ಪೂರಕವಾದ 1.5 ಲೀಟರ್ ಪೆಟ್ರೋಲ್‌ ಮತ್ತು ಡೀಸೆಲ್‌ ಹಾಗೂ ಪೆಟ್ರೋಲ್‌ನ 1 ಲೀಟರ್‌ ಟರ್ಬೊ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಆಟೊಮೆಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಯೂ ಇದೆ.

ADVERTISEMENT

ಹೊಸ ಅವತರಣಿಕೆಯು ಚಾಲಕರಿಗೆ ಹೊಸ ಅನುಭವ ಕಟ್ಟಿಕೊಡಲಿದೆ. ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೆಡಾನ್ ವಿಭಾಗದಲ್ಲಿ ಹೊಸ ಮೈಲುಗಲ್ಲು ಬರೆಯಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎಸ್‌. ಕಿಮ್‌ ತಿಳಿಸಿದ್ದಾರೆ.

ಕೆಲವು ವೈಶಿಷ್ಟ್ಯ

20.32 ಇಂಚು ಟಚ್‌ಸ್ಕ್ರೀನ್‌ ಡಿಸ್‌ಪ್ಲೇ

ವಯರ್‌ಲೆಸ್‌ ಚಾರ್ಜರ್‌

ಎಲೆಕ್ಟ್ರಿಕ್‌ ಸನ್‌ ರೂಫ್‌

ಎಲೆಕ್ಟ್ರಿಕ್‌ ಸ್ಟೆಬಿಲಿಟಿ ಕಂಟ್ರೋಲ್‌

ಹಿಲ್‌ ಸ್ಟಾರ್ಟ್‌ ಅಸಿಸ್ಟ್‌ ಕಂಟ್ರೋಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.