ADVERTISEMENT

ಹುಂಡೈನಿಂದ ಬ್ಯಾಟರಿ ಎಲೆಕ್ಟ್ರಿಕ್‌ ಪ್ಲಾಟ್‌ಫಾರಂ

ಪಿಟಿಐ
Published 10 ನವೆಂಬರ್ 2022, 19:10 IST
Last Updated 10 ನವೆಂಬರ್ 2022, 19:10 IST
ಹುಂಡೈ ಮೋಟರ್‌ ಇಂಡಿಯಾ ಕಂಪನಿ
ಹುಂಡೈ ಮೋಟರ್‌ ಇಂಡಿಯಾ ಕಂಪನಿ   

ನವದೆಹಲಿ: ‘ಅಯೋನಿಕ್‌ 5’ ಮಾದರಿಯ ಮೂಲಕ ದೇಶದಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ವಾಹನಗಳ ಪ್ಲಾಟ್‌ಫಾರಂ ಪರಿಚಯಿಸುವುದಾಗಿ ಹುಂಡೈ ಮೋಟರ್‌ ಇಂಡಿಯಾ ಕಂಪನಿ ಹೇಳಿದೆ.

ಎಲೆಕ್ಟ್ರಿಕ್‌ ಗ್ಲೋಬಲ್‌ ಮಾಡ್ಯುಲರ್‌ ಪ್ಲಾಟ್‌ಫಾರಂ (ಇ–ಜಿಎಂಪಿ) ಆಧರಿತ ಕಂಪನಿಯ ಮೊದಲ ಮಾದರಿ ‘ಅಯೋನಿಕ್‌ 5’ ಆಗಿದ್ದು, 2023ರ ಜನರಿಯಲ್ಲಿ ನಡೆಯಲಿರುವ ವಾಹನ ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ.

ಭಾರತದಲ್ಲಿ ಹೊಸ ಕಾಲದ ಗ್ರಾಹಕರಿಗೆ ಹೊಸ ವರ್ಗದ ವಿದ್ಯುತ್ ವಾಹನಗಳನ್ನು ನೀಡಲು ‘ಇ–ಜಿಎಂಪಿ’ ಕಾರಣವಾಗಲಿದೆ ಎಂದು ಹುಂಡೈ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನ್ಸು ಕಿಮ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

2028ರ ವೇಳೆಗೆ ಭಾರತದಲ್ಲಿ ಆರು ವಿದ್ಯುತ್ ವಾಹನ ಮಾದರಿಗಳನ್ನು ಪರಿಚಯಿಸಲು ₹ 4 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಕಂಪನಿಯು ಕಳೆದ ವರ್ಷ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.