ADVERTISEMENT

ಟಾಟಾ ಸಂಸ್ಥೆಗೆ ಮಾತ್ರ ಏರ್ ಇಂಡಿಯಾ ನಿರ್ವಹಣೆ ಸಾಧ್ಯ: ಎಮಿರೇಟ್ಸ್ ಅಧ್ಯಕ್ಷ

ಪಿಟಿಐ
Published 21 ಜೂನ್ 2022, 13:58 IST
Last Updated 21 ಜೂನ್ 2022, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೋಹಾ: ಭಾರತದಲ್ಲಿ ವಿಮಾನ ಸಂಸ್ಥೆ ಸಂಸ್ಥೆ ನಿರ್ವಹಿಸುವುದು ಸುಲಭದ ವಿಚಾರವಲ್ಲ ಎಂದು ಪ್ರತಿಪಾದಿಸಿರುವ ಎಮಿರೇಟ್ಸ್ ಅಧ್ಯಕ್ಷ ಟಿಮ್ ಕ್ಲಾರ್ಕ್ ಅವರು, ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ನಿರ್ವಹಿಸಲಾಗದಿದ್ದರೆ, ಬೇರೆ ಯಾರಿಂದಲೂ ಈ ಸಂಸ್ಥೆಯನ್ನು ನಿರ್ವಹಿಸಲಾಗದು ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ 78ನೇ ವಾರ್ಷಿಕ ಸಾಮಾನ್ಯ ಸಭೆಯ ಭಾಗವಾಗಿಸೋಮವಾರ ಮಾತನಾಡಿದ ಕ್ಲಾರ್ಕ್ ಅವರು, ‘ದೇಶೀಯ ಮಾರುಕಟ್ಟೆ, ಭಾರತಕ್ಕೆ ಒಳಹರಿವು ಮತ್ತು ಹೊರ ಹರಿವಿನ ಆರ್ಥಿಕ ಚಟುವಟಿಕೆಗಳ ಕಾರಣದಿಂದಾಗಿ ಏರ್ ಇಂಡಿಯಾ ಬೃಹತ್ ಸಂಸ್ಥೆಯಾಗಿದೆ. ಇದೊಂದು ಚಿನ್ನದ ಗಣಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT