ADVERTISEMENT

ಐಐಎಫ್‌ಸಿಎಲ್‌ನಿಂದ ರಾಜ್ಯದ ಯೋಜನೆಗಳಿಗೆ ನೆರವು

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 22:30 IST
Last Updated 19 ಜುಲೈ 2023, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮೂಲಸೌಕರ್ಯ ವಲಯದ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವ, ಕೇಂದ್ರ ಸರ್ಕಾರದ ಮಾಲೀಕತ್ವದ ‘ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್‌’ (ಐಐಎಫ್‌ಸಿಎಲ್‌) ಕರ್ನಾಟಕದ 35ಕ್ಕೂ ಹೆಚ್ಚಿನ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್. ಜಯಶಂಕರ್ ತಿಳಿಸಿದರು.

ಕಂಪನಿಯು ಬೆಂಗಳೂರಿನಲ್ಲಿ ಬುಧವಾರ ಆಯೋಜಿಸಿದ್ದ ಪಾಲುದಾರರ ಸಭೆಯ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಕರ್ನಾಟಕದಲ್ಲಿ ಒಟ್ಟು ₹62,963 ಕೋಟಿ ಮೊತ್ತದ ಯೋಜನೆಗಳಿಗೆ ಐಐಎಫ್‌ಸಿಎಲ್‌ ನೆರವು ನೀಡಿದೆ ಎಂದು ಅವರು ತಿಳಿಸಿದರು. ಕಂಪನಿಯ ಷೇರುಗಳನ್ನು ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ ಷೇರುಪೇಟೆಯಲ್ಲಿ ನೋಂದಾಯಿಸುವ ಆಲೋಚನೆ ಕುರಿತ ಪ್ರಶ್ನೆಗೆ ಅವರು, ‘ವಾತಾವರಣ ಪೂರಕವಾಗಿದ್ದಾಗ ಐಪಿಒ ನಡೆಯಬಹುದು’ ಎಂದರು.

ADVERTISEMENT

ಐಐಎಫ್‌ಸಿಎಲ್‌ ಕಂಪನಿಯು 2022–23ನೆಯ ಹಣಕಾಸು ವರ್ಷದಲ್ಲಿ ₹1,076 ಕೋಟಿ ತೆರಿಗೆ ನಂತರದ ಲಾಭ ಕಂಡಿದೆ. ಕಂಪನಿಯ ಎನ್‌ಪಿಎ ಪ್ರಮಾಣವು ಶೇ 1.41ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.