ADVERTISEMENT

ಏರ್‌ ಇಂಡಿಯಾ ಸಿಇಒ ಹುದ್ದೆ ನಿರಾಕರಿಸಿದ ಇಲ್ಕರ್ ಆಯ್ಚಿ

ಪಿಟಿಐ
Published 1 ಮಾರ್ಚ್ 2022, 11:45 IST
Last Updated 1 ಮಾರ್ಚ್ 2022, 11:45 IST
ಇಲ್ಕರ್ ಆಯ್ಚಿ
ಇಲ್ಕರ್ ಆಯ್ಚಿ   

ನವದೆಹಲಿ: ಏರ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹುದ್ದೆ ವಹಿಸಿಕೊಳ್ಳಲು ಇಲ್ಕರ್ ಆಯ್ಚಿ ಅವರು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಯ್ಚಿ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಏರ್ ಇಂಡಿಯಾದ ಮಾಲೀಕತ್ವ ಹೊಂದಿರುವ ಟಾಟಾ ಸಮೂಹವು ಫೆಬ್ರುವರಿ 14ರಂದು ತಿಳಿಸಿತ್ತು. ಆಯ್ಚಿ ಅವರು ಟರ್ಕಿಷ್ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ.

ಆದರೆ, ‘ರಾಷ್ಟ್ರದ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡು’ ಆಯ್ಚಿ ಅವರ ನೇಮಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಾರದು ಎಂದು ಆರ್‌ಎಸ್‌ಎಸ್‌ ಜೊತೆ ನಂಟು ಹೊಂದಿರುವ ಸ್ವದೇಶಿ ಜಾಗರಣ ಮಂಚ್ ಈಚೆಗೆ ಆಗ್ರಹಿಸಿತ್ತು. ಈ ವಿಚಾರವನ್ನು ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸ್ವದೇಶಿ ಜಾಗರಣ ಮಂಚ್‌ನ ಸಹ ಸಂಚಾಲಕ ಅಶ್ವನಿ ಮಹಾಜನ್ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.