ADVERTISEMENT

ಇಂಡೆಲ್ ಮನಿ, ಇಂಡಸ್‌ಇಂಡ್‌ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 13:07 IST
Last Updated 29 ಸೆಪ್ಟೆಂಬರ್ 2021, 13:07 IST

ಬೆಂಗಳೂರು: ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ (ಎನ್‌ಬಿಎಫ್‌ಸಿ) ಇಂಡೆಲ್‌ ಮನಿ, ಚಿನ್ನದ ಮೇಲಿನ ಸಾಲಕ್ಕೆ ಸಂಬಂಧಿಸಿದಂತೆ ಇಂಡಸ್‌ಇಂಡ್‌ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಚಿನ್ನದ ಮೇಲಿನ ಸಾಲವನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ನೀಡಲು ಈ ಒಪ್ಪಂದವು ಸಹಕಾರಿ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಒಪ್ಪಂದದ ಪ್ರಕಾರ ಇಂಡೆಲ್ ಮನಿ ಕಂಪನಿಯು ಸಾಲದ ಶೇಕಡ 20ರಷ್ಟು ಮೊತ್ತವನ್ನು, ಇಂಡಸ್‌ಇಂಡ್‌ ಬ್ಯಾಂಕ್‌ ಇನ್ನುಳಿದ ಶೇ 80ರಷ್ಟು ಮೊತ್ತವನ್ನು ನೀಡಲಿವೆ. ಸದ್ಯಕ್ಕೆ ಇದು ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ನಂತರದಲ್ಲಿ ದೇಶದಾದ್ಯಂತ ವಿಸ್ತರಣೆ ಕಾಣಲಿದೆ.

‘ಇಂಡಸ್‌ಇಂಡ್‌ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಸಂತಸ ತಂದಿದೆ. ಪಾಲುದಾರಿಕೆಯಲ್ಲಿ ಸಾಲ ನೀಡುವ ಈ ಒಪ್ಪಂದವು ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸುತ್ತದೆ. ಇದು ಬ್ಯಾಂಕ್‌ ನಮ್ಮ ಮೇಲೆ ಇರಿಸಿರುವ ವಿಶ್ವಾಸವನ್ನು ಕೂಡ ತೋರಿಸುತ್ತದೆ’ ಎಂದು ಇಂಡೆಲ್ ಮನಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಉಮೇಶ್ ಮೋಹನನ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.