ADVERTISEMENT

‘ಶೇ 11.3ರವರೆಗೆ ವೇತನ ಹೆಚ್ಚಳ’: ಟೀಮ್‌ಲೀಸ್‌ ಸರ್ವಿಸಸ್‌ ವರದಿ

ಪಿಟಿಐ
Published 29 ಜುಲೈ 2025, 12:53 IST
Last Updated 29 ಜುಲೈ 2025, 12:53 IST
   

ಮುಂಬೈ: ದೇಶದ ಕಾರ್ಪೊರೇಟ್ ಕಂಪನಿಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ತಮ್ಮ ನೌಕರರ ವೇತನವನ್ನು ಶೇಕಡ 6.2ರಿಂದ ಶೇ 11.3ರವರೆಗೆ ಹೆಚ್ಚಿಸಬಹುದು ಎಂದು ಟೀಮ್‌ಲೀಸ್‌ ಸರ್ವಿಸಸ್‌ನ ವರದಿಯೊಂದು ಅಂದಾಜು ಮಾಡಿದೆ.

20 ನಗರಗಳ 23 ಉದ್ಯಮ ವಲಯಗಳ 1,308 ಕಂಪನಿಗಳಿಂದ ಮಾಹಿತಿ ಪಡೆದು ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇ.ವಿ ಹಾಗೂ ಇ.ವಿ. ಸಂಬಂಧಿತ ಮೂಲಸೌಕರ್ಯ ವಲಯದ ಉದ್ದಿಮೆಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ (ಶೇ 11.3ರಷ್ಟು) ವೇತನ ಹೆಚ್ಚಳ ಆಗಬಹುದು ಎಂದು ವರದಿಯು ಅಂದಾಜಿಸಿದೆ.

ಗ್ರಾಹಕ ಬಳಕೆಯ ಉಪಕರಣಗಳು (ಶೇ 10.7ರಷ್ಟು), ರಿಟೇಲ್‌ (ಶೇ 10.7ರಷ್ಟು), ಎನ್‌ಬಿಎಫ್‌ಸಿ (ಶೇ 10.4ರಷ್ಟು) ವಲಯಗಳು ನಂತರದ ಸ್ಥಾನಗಳಲ್ಲಿ ಇವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.