
ದಾವೋಸ್: ಮುಂದಿನ ಐದು ವರ್ಷಗಳವರೆಗೆ ಭಾರತದ ಆರ್ಥಿಕ ಬೆಳವಣಿಗೆ ದರವು ಶೇಕಡ 6–8ರ ಮಟ್ಟದಲ್ಲಿ ಇರಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ಹೇಳಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ ಅವರು, ಅನುಮತಿಗಳನ್ನು ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವುದರ ಪ್ರಾಮುಖ್ಯವನ್ನು ವಿವರಿಸಿದ್ದಾರೆ. ಭಾರತದಲ್ಲಿ ಒಂದು ದೂರಸಂಪರ್ಕ ಟವರ್ ಅಳವಡಿಕೆಗೆ ಈ ಮೊದಲು ಸರಾಸರಿ 270 ದಿನಗಳು ಬೇಕಾಗುತ್ತಿದ್ದವು, ಅದು ಈಗ ಏಳು ದಿನಗಳಿಗೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಉದ್ದೇಶ ಹಾಗೂ ಕ್ರಿಯೆಯ ನಡುವಿನ ಅಂತರವನ್ನು ತಗ್ಗಿಸಬೇಕು. ಅಧಿಕಾರಶಾಹಿ ವ್ಯವಸ್ಥೆಯು ರಾಜಕೀಯ ಶಕ್ತಿಯ ಜೊತೆ ಹೊಂದಿಕೊಳ್ಳುವಂತೆ ರಾಜಕೀಯ ನಾಯಕರು ಖಾತರಿಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ಅಧ್ಯಕ್ಷ ರಾಜೀವ್ ಮೆಮಾನಿ, ‘ಭಾರತದಲ್ಲಿ ತಲಾವಾರು ಆದಾಯವು ಬಹಳ ಕಡಿಮೆ ಇದೆ. ಇದನ್ನು 2047ರ ವೇಳೆಗೆ ಐದು ಪಟ್ಟು ಹೆಚ್ಚಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.