ADVERTISEMENT

ರಫ್ತು ಹೆಚ್ಚಿಸಲು 50 ದೇಶಗಳ ಕಡೆ ಗಮನ: ಕೇಂದ್ರ ಸರ್ಕಾರ

ಪಿಟಿಐ
Published 11 ಆಗಸ್ಟ್ 2025, 13:31 IST
Last Updated 11 ಆಗಸ್ಟ್ 2025, 13:31 IST
   

ನವದೆಹಲಿ: ಭಾರತದ ಸರಕುಗಳಿಗೆ ಅಮೆರಿವು ಭಾರಿ ಪ್ರಮಾಣದಲ್ಲಿ ಸುಂಕ ವಿಧಿಸಿರುವ ಸಂದರ್ಭದಲ್ಲಿ, ಭಾರತದಿಂದ ರಫ್ತು ಹೆಚ್ಚಿಸಲು ಕೇಂದ್ರ ಸರ್ಕಾರವು ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾ ಹಾಗೂ ಆಫ್ರಿಕಾದ ದೇಶಗಳು ಸೇರಿ ಒಟ್ಟು 50 ದೇಶಗಳನ್ನು ಗುರಿಯಾಗಿಸಿಕೊಂಡು ರಫ್ತು ಹೆಚ್ಚು ಮಾಡುವುದು ಕೂಡ ಕೇಂದ್ರದ ಕ್ರಮಗಳ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ. ಈ ದೇಶಗಳು ಭಾರತದ ಒಟ್ಟು ರಫ್ತಿನ ಶೇ 90ರಷ್ಟು ಪಾಲನ್ನು ಹೊಂದಿವೆ.

ಕೇಂದ್ರ ವಾಣಿಜ್ಯ ಸಚಿವಾಲಯವು 20 ದೇಶಗಳನ್ನು ಕೇಂದ್ರೀಕರಿಸಿಕೊಂಡು ಅದಾಗಲೇ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಈಗ ಹೆಚ್ಚುವರಿಯಾಗಿ 30 ದೇಶಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಗೊತ್ತಾಗಿದೆ.

ADVERTISEMENT

ಹೊಸ ಮಾರುಕಟ್ಟೆ ಅರಸಲು ಸಲಹೆ: ಸಾಗರೋತ್ಪನ್ನಗಳ ರಫ್ತುದಾರರು ಅಮೆರಿಕ ವಿಧಿಸಿರುವ ಭಾರಿ ಸುಂಕದ ಸವಾಲನ್ನು ಧೈರ್ಯದಿಂದ ಎದುರಿಸಬೇಕು, ಸೀಗಡಿ ಹಾಗೂ ಇತರ ಉತ್ಪನ್ನಗಳನ್ನು ರಫ್ತು ಮಾಡಲು ಪರ್ಯಾಯ ಮಾರುಕಟ್ಟೆಗಳನ್ನು ಅರಸಬೇಕು ಎಂದು ಕೇಂದ್ರ ಹೇಳಿದೆ.

ಕೇಂದ್ರ ಮೀನುಗಾರಿಕಾ ಸಚಿವ ರಾಜೀವ್ ರಂಜನ್ ಸಿಂಗ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ‘ಭಾರತದ ಸಾಗರೋತ್ಪನ್ನಗಳ ರಫ್ತಿಗೆ ಪರ್ಯಾಯ ಮಾರುಕಟ್ಟೆಗಳು ಲಭ್ಯವಿವೆ’ ಎಂದು ಹೇಳಿದ್ದಾರೆ.

‘ಐರೋಪ್ಯ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್, ರಷ್ಯಾ, ಆಸ್ಟ್ರೇಲಿಯಾ, ಪಶ್ಚಿಮ ಏಷ್ಯಾ ಹಾಗೂ ಇತರ ಹಲವು ದೇಶಗಳಿಗೆ ರಫ್ತು ಮಾಡಲು ಅವಕಾಶ ಇದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.