ADVERTISEMENT

2024-25ನೇ ಸಾಲಿನಲ್ಲಿ 2.87 ಲಕ್ಷ ಟನ್‌ ಸಕ್ಕರೆ ರಫ್ತು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 12:32 IST
Last Updated 9 ಏಪ್ರಿಲ್ 2025, 12:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024-25ನೇ ಮಾರುಕಟ್ಟೆ ವರ್ಷದಲ್ಲಿ ಇಲ್ಲಿಯವರೆಗೆ 2.87 ಲಕ್ಷ ಟನ್‌ ಸಕ್ಕರೆ ರಫ್ತು ಮಾಡಲಾಗಿದೆ ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ.

ಈ ಮಾರುಕಟ್ಟೆ ಋತುವಿನಲ್ಲಿ 10 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. 

ಒಟ್ಟು ರಫ್ತಿನ ಪೈಕಿ ಸೊಮಾಲಿಯಾ 51,596 ಟನ್‌, ಅಫ್ಗಾನಿಸ್ತಾನ 48,864 ಟನ್‌, ಶ್ರೀಲಂಕಾ 46,757 ಟನ್‌ ಮತ್ತು ಲಿಬಿಯಾಕ್ಕೆ 30,729 ಟನ್‌ ರವಾನಿಸಲಾಗಿದೆ. ಸದ್ಯ ರಫ್ತು ಪ್ರಮಾಣ ಮಂದಗತಿಯಲಿದ್ದು, ಈ ತಿಂಗಳಿನಲ್ಲಿ ಚೇತರಿಕೆ ಕಾಣಲಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.