ADVERTISEMENT

ಜನವರಿ–ಫೆಬ್ರುವರಿ ಅವಧಿಯಲ್ಲಿ 87 ಸಾವಿರ ಟನ್‌ ಈರುಳ್ಳಿ ರಫ್ತು: ತೋಮರ್‌

ಪಿಟಿಐ
Published 9 ಮಾರ್ಚ್ 2021, 19:30 IST
Last Updated 9 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈರುಳ್ಳಿ ರಫ್ತು ನಿಷೇಧ ಹಿಂಪಡೆದ ನಂತರ, ಜನವರಿ–ಫೆಬ್ರುವರಿ ಅವಧಿಯಲ್ಲಿ 87 ಸಾವಿರ ಟನ್‌ ಈರುಳ್ಳಿ ರಫ್ತು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.

ಮುಂಗಾರು ಇಳುವರಿ ಉತ್ತಮವಾಗಿರುವ ನಿರೀಕ್ಷೆಯಿಂದ ಜನವರಿ 1ರಿಂದ ರಫ್ತು ನಿಷೇಧ ಹಿಂಪಡೆಯಲಾಗಿದೆ ಎಂದು ಅವರು ಲಿಖಿತ ಉತ್ತರ ನೀಡಿದ್ದಾರೆ. 2019–20ರಲ್ಲಿ ₹ 2,320 ಕೋಟಿ ಮೌಲ್ಯದ 11.50 ಲಕ್ಷ ಟನ್‌ ಈರುಳ್ಳಿ ರಫ್ತು ಮಾಡಲಾಗಿತ್ತು.

2020ರ ಡಿಸೆಂಬರ್‌ನಲ್ಲಿ ದೇಶದಾದ್ಯಂತ ಈರುಳ್ಳಿಯ ಸರಾಸರಿ ರಿಟೇಲ್‌ ದರವು ಕೆ.ಜಿಗೆ ₹ 44.33 ಇತ್ತು. 2021ರ ಜನವರಿಯಲ್ಲಿ ಕೆ.ಜಿಗೆ ₹ 38.59 ಹಾಗೂ ಫೆಬ್ರುವರಿಯಲ್ಲಿ ಕೆ.ಜಿಗೆ ₹ 44.08ರಷ್ಟಾಗಿತ್ತು ಎಂದು ಅವರು ವಿವರಿಸಿದ್ದಾರೆ.

ADVERTISEMENT

ಬೆಲೆ ಸ್ಥಿರತೆ ನಿಧಿಯ ಅಡಿಯಲ್ಲಿ 2021–22ರ ಅವಧಿಯಲ್ಲಿ 2 ಲಕ್ಷ ಟನ್‌ಗಳಷ್ಟು ಹಿಂಗಾರು ಈರುಳ್ಳಿ ಬೆಳೆಯನ್ನು ಸಂಗ್ರಹಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.