ADVERTISEMENT

ಮಾರ್ಚ್‌ನಲ್ಲಿ ಕಂಪನಿಗಳ ವಿದೇಶಿ ಸಾಲ ಸಂಗ್ರಹ ಶೇ 24ರಷ್ಟು ಹೆಚ್ಚಳ

ಪಿಟಿಐ
Published 2 ಮೇ 2021, 16:21 IST
Last Updated 2 ಮೇ 2021, 16:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ‌ಬಾಹ್ಯ ವಾಣಿಜ್ಯ ಸಾಲದ (ಇಸಿಬಿ) ಮೂಲಕ ಭಾರತದ ಕಂಪನಿಗಳು ಮಾರ್ಚ್‌ನಲ್ಲಿ ಪಡೆದಿರುವ ಸಾಲದ ಮೊತ್ತವು ಹಿಂದಿನ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇಕಡ 24ರಷ್ಟು ಹೆಚ್ಚಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಕಂಪನಿಗಳು ಪಡೆದಿರುವ ಸಾಲವು 2020ರ ಮಾರ್ಚ್‌ನಲ್ಲಿ ₹ 55,056 ಕೋಟಿಗಳಷ್ಟಿತ್ತು. ಇದು 2021ರ ಮಾರ್ಚ್‌ನಲ್ಲಿ ₹ 68,302 ಕೋಟಿಗಳಿಗೆ ತಲುಪಿದೆ.

ಇಂಡಿಯನ್‌ ರೇಲ್ವೆ ಫೈನಾನ್ಸ್ ಕಾರ್ಪೊರೇಷನ್ (ಐಆರ್‌ಎಫ್‌ಸಿ), ಒಎನ್‌ಜಿಸಿ ವಿದೇಶ್ ರೋವುಮಾ ಮತ್ತು ಆರ್‌ಇಸಿ ಲಿಮಿಟೆಡ್‌, ಅದಾನಿ ಹೈಬ್ರಿಡ್‌ ಎನರ್ಜಿ ಜೈಸಲ್ಮೇರ್‌, ಭಾರ್ತಿ ಏರ್‌ಟೆಲ್‌, ಪಿಜಿಪಿ ಗ್ಲಾಸ್‌ ಮತ್ತು ಎನ್‌ಟಿಪಿಸಿ ಸೇರಿದಂತೆ ಹಲವು ಕಂಪನಿಗಳು ಬಂಡವಾಳ ಸಂಗ್ರಹಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.