ADVERTISEMENT

ಕೋವಿಡ್‌–19 ಲಸಿಕೆ: ಕಸ್ಟಮ್ಸ್‌ ಸುಂಕ ಕೈಬಿಡುವ ಸಾಧ್ಯತೆ

ಪಿಟಿಐ
Published 20 ಏಪ್ರಿಲ್ 2021, 17:15 IST
Last Updated 20 ಏಪ್ರಿಲ್ 2021, 17:15 IST

ನವದೆಹಲಿ: ಕೇಂದ್ರ ಸರ್ಕಾರವು ಆಮದಾಗುವ ಕೋವಿಡ್‌–19 ಲಸಿಕೆಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರವು ಮುಂದಾಗಿದ್ದು, ದೇಶದಲ್ಲಿ ಲಸಿಕೆಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ, ಆಮದು ಮಾಡಿಕೊಳ್ಳುವ ಲಸಿಕೆಗಳ ದರ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಗೊತ್ತಾಗಿದೆ.

ಸರ್ಕಾರವು ಸದ್ಯ ಆಮದಾಗುತ್ತಿರುವ ಲಸಿಕೆಗಳ ಮೇಲೆ ಶೇಕಡ 10ರಷ್ಟು ಕಸ್ಟಮ್ಸ್‌ ಸುಂಕ, ಶೇ 16.5ರಷ್ಟು ಐಜಿಎಸ್‌ಟಿ ಮತ್ತು ಸಾಮಾಜಿಕ ಕಲ್ಯಾಣ ಸರ್ಚಾರ್ಜ್‌ ವಿಧಿಸುತ್ತಿದೆ. ಈ ತೆರಿಗೆಗಳಿಂದಾಗಿ ಆಮದು ಮಾಡಿಕೊಳ್ಳುವ ಲಸಿಕೆಗಳ ಬೆಲೆಯು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಮತ್ತು ಭಾರತ್‌ ಬಯೋಟೆಕ್‌ ಕಂಪನಿಗಳು ತಯಾರಿಸುವ ಲಸಿಕೆಗಳಿಗಿಂತಲು ದುಬಾರಿ ಆಗುತ್ತಿವೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.