ನವದೆಹಲಿ: ರಿಲಯನ್ಸ್ ಕೈಗಾರಿಕೆಗಳ ಒಕ್ಕೂಟದ ಮಾಲೀಕ, ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಜೀವಬೆದರಿಕೆ ಒಡ್ಡಿದ ಆರೋಪದಡಿ ಬಿಹಾರದ ವ್ಯಕ್ತಿಯನ್ನು ಮುಂಬೈನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಂಪನಿಯ ಪ್ರತಿಷ್ಠಾನ ನಡೆಸುವ ಆಸ್ಪತ್ರೆಯೊಂದರ ಸಹಾಯವಾಣಿಗೆ ಬುಧವಾರ ಎರಡು ದೂರವಾಣಿ ಕರೆಗಳು ಬಂದಿದ್ದವು. ಆಸ್ಪತ್ರೆ ಸ್ಫೋಟಿಸುವ ಹಾಗೂ ಅಂಬಾನಿ, ಅವರ ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಅಲ್ಲದೆ, ಅಂಬಾನಿ ಅವರ ಮುಂಬೈನಲ್ಲಿನ ಕುಟುಂಬದ ನಿವಾಸವಾದ ಗಗನಚುಂಬಿ ಕಟ್ಟಡ ಅಂಟಿಲಿಯಾ ಅನ್ನೂ ಸ್ಫೋಟಿಸುವುದಾಗಿ ಹೇಳಲಾಗಿತ್ತು.
ಈ ಬೆದರಿಕೆ ಕರೆಗೆ ಸಂಬಂಧಿಸಿದಂತೆ ಬಿಹಾರದ ದರ್ಭಾಂಗಾದಿಂದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದು ಈ ಕುರಿತು ತನಿಖೆ ನಡೆದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.